ಎಲ್ಲರೂ ಇಷ್ಟ ಪಡುವ Starter! ಮಕ್ಕಳಿಗಂತೂ Favourite!

ಮಾಡುವ ವಿಧಾನ:-

1 ಹೂ ಕೋಸನ್ನು ಒಂದೊಂದೇ ಚಿಕ್ಕ ಚಿಕ್ಕದಾಗಿ ಹೂವಿನಂತೆ ಬಿಡಿಸಿಟ್ಟು ಕೊಳ್ಳಿ. ಹೂ ಕೋಸಿನಲ್ಲಿ ಹುಳ ತುಂಬಾ ಇರುತ್ತದೆ. ಎಚ್ಚರಿಕೆಯಿಂದ ನೋಡಿ.

1 ಲೀಟರ್ ನೀರು ಬಿಸಿ ಮಾಡಿ, ಸ್ವಲ್ಪ ಉಪ್ಪು, ಅರಿಶಿಣ ಹಾಕಿ ಗೋಬಿ ಹೂಗಳನ್ನು ಅದರಲ್ಲಿ ಹಾಕಿ 20 ನಿಮಿಷ ಬಿಡಿ. ನಂತರ ನೀರು ಸೋರಿ ಹಾಕಿಡಿ.

   

2 ಈರುಳ್ಳಿ ಸಣ್ಣಗೆ ಹೆಚ್ಚಿಡಿ. 1 ಬೆಳ್ಳುಳ್ಳಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. 4 ಹಸಿ ಮೆಣಸಿನ ಕಾಯಿ ಉದ್ದಕ್ಕೆ ಸೀಳಿಡಿ.

5 ಚಮಚ ಕಾರ್ನ್ ಫ್ಲೋರ್, 5 ಚಮಚ ಮೈದಾ, ಉಪ್ಪು, 2 ಚಮಚ ಖಾರಾ ಪುಡಿ ಸ್ವಲ್ಪ ನೀರು ಹಾಕಿ ಬಜ್ಜಿ ಹಿಟ್ಟಿನ ಹದಕ್ಕಿಂತ ಸ್ವಲ್ಪ ತೆಳ್ಳಗೆ ಕಲೆಸಿಡಿ.

ಬಾಣಲೆಯಲ್ಲಿ ಎಣ್ಣೆ ಹಾಕಿ ಕಾದ ನಂತರ ಸ್ವಲ್ಪ ಸ್ವಲ್ಪವೇ ಗೋಬಿ ಹೂಗಳನ್ನು ಹಾಕಿ ಒಂದೊಂದು ಹೂವು ಬೇರೆ ಬೇರೆ ಇರುವಂತೆ ಬಿಡಿ ಬಿಡಿಯಾಗಿ ಹಾಕಿ ಮಧ್ಯಮ ಉರಿಯಲ್ಲಿ ಗರಿ ಗರಿಯಾಗಿ ಕರಿಯಿರಿ.

  

ಎಲ್ಲಾ ಹೂಗಳನ್ನು ಕರಿದಾದ ಮೇಲೆ ಬಾಣಲೆಯಲ್ಲಿ 5 ಚಮಚ ಎಣ್ಣೆ ಹಾಕಿ, ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಹಸಿ ಮೆಣಸಿನ ಕಾಯಿ ಹಾಕಿ ಹುರಿದು ತಲಾ 2 ಚಮಚ, ಸೋಯಾ ಸಾಸ್, ವಿನೆಗರ್, ಟೊಮೇಟೋ ಸಾಸ್, ಸ್ವಲ್ಪ ಉಪ್ಪು ಹಾಕಿ ಕಲೆಸಿ, ಕರಿದ ಗೋಬಿ ಹೂಗಳನ್ನು ಹಾಕಿ ಕಲೆಸಿ ಸ್ವಲ್ಪ ಬಿಸಿ ಮಾಡಿ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿ ಟೊಮೇಟೋ ಸಾಸ್ ಜೊತೆ ಸವಿಯಿರಿ.

ಈರುಳ್ಳಿ ಹೂ ಸಿಕ್ಕರೆ ಸ್ವಲ್ಪ ಒಗ್ಗರಣೆಗೆ ಹಾಕಿದರೆ ಚೆನ್ನಾಗಿರುತ್ತದೆ.

ಇದೇ ರೀತಿ ಬೇಕಾದರೆ, ಬೇಬಿ ಕಾರ್ನ್, ಮಶ್ರೂಮ್, ಪನ್ನೀರ್ ಹಾಕಿ ಕೂಡಾ ಮಾಡಬಹುದು.

ಧನ್ಯವಾದಗಳು.