ಉತ್ತರ ಭಾರತದ ಜನಪ್ರಿಯ ತಿಂಡಿ!

ಮಾಡುವ ವಿಧಾನ:-

ಉದ್ದಿನ ಬೇಳೆ ತೊಳೆದು 2 ಗಂಟೆ ನೆನೆಸಿ, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ, ಉಪ್ಪು, ಹೆಚ್ಚಿದ ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನ ಕಾಯಿ ಹಾಕಿ ಕಲೆಸಿ ಸಣ್ಣ ಸಣ್ಣದಾಗಿ ಗುಂಡಗೆ ಕಾದ ಎಣ್ಣೆಯಲ್ಲಿ ಕರಿದಿಡಿ.

1 ಲೀಟರ್ ನಷ್ಟು ನೀರು ಬಿಸಿ ಮಾಡಿ ಸ್ವಲ್ಪ ಉಪ್ಪು ಸೇರಿಸಿ. ಕರಿದ ಉಂಡೆಗಳನ್ನು ಹಾಕಿ 2 ನಿಮಿಷದ ನಂತರ ತೆಗೆದು ಸ್ವಲ್ಪ ಹಿಂಡಿಡಿ.

   

ಸ್ವಲ್ಪ ಪುದೀನ, ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನ ಕಾಯಿ, ಉಪ್ಪು ಹಾಕಿ ರುಬ್ಬಿ ಸ್ವಲ್ಪ ನಿಂಬೆ ರಸ ಸೇರಿಸಿ ಹಸಿರು ಚಟ್ನಿ ಮಾಡಿಡಿ.

ಹುಣಿಸೆ ರಸ, ಚೂರು ಬೆಲ್ಲ ಅಥವಾ ಖರ್ಜೂರ ಸೇರಿಸಿ ರುಬ್ಬಿ ಸಿಹಿ ಚಟ್ನಿ ಮಾಡಿಡಿ.

   

ತಾಜಾ ಮೊಸರಿಗೆ ಸ್ವಲ್ಪ ಉಪ್ಪು, ಸಕ್ಕರೆ ಸೇರಿಸಿ ಕಡೆದು ಹಿಂಡಿಟ್ಟ ವಡೆ ಉಂಡೆಗಳ ಮೇಲೆ ಹಾಕಿ, ಅದರ ಮೇಲೆ 1 ಚಮಚ ಹಸಿರು ಚಟ್ನಿ, 1 ಚಮಚ ಸಿಹಿ ಚಟ್ನಿ ಹಾಕಿ, ಚಿಟಿಕೆ ಖಾರದ ಪುಡಿ, ಚಿಟಿಕೆ ಚಾಟ್ ಮಸಾಲ ಉದುರಿಸಿದರೆ ರುಚಿಯಾದ ದಹಿ ವಡ ಸಿದ್ಧ!

ಧನ್ಯವಾದಗಳು.