ಚಾಟ್ ಮಸಾಲ ಪುಡಿಯನ್ನು ಸಾಮಾನ್ಯವಾಗಿ ಎಲ್ಲಾ ಚಾಟ್ಸ್ ಗಳಲ್ಲಿ, ಕಟ್ಲೆಟ್, ಕೆಲವು ಗ್ರೇವಿಗಳಲ್ಲಿ, ತಾಜಾ ಹಣ್ಣು, ತರಕಾರಿಗಳ ಮೇಲೆ ಹಾಕಿ ತಿನ್ನಲು ಬಳಸುತ್ತಾರೆ. ರೆಡಿ ಮೇಡ್ ಎಲ್ಲಾ ಕಡೆ ಸಿಗುತ್ತೆ. ಅದನ್ನು ಮನೆಯಲ್ಲಿ ಸುಲಭವಾಗಿ ಮಾಡುವ ರೆಸಿಪಿ ಇಲ್ಲಿದೆ.

ಮಾಡುವ ವಿಧಾನ:-

ಧನಿಯ – 1 ಟೇಬಲ್ ಚಮಚ
ಕರಿ ಮೆಣಸು – 1 ಟೀ ಚಮಚ
ಲವಂಗ – 10
ಏಲಕ್ಕಿ – 10
ಚಕ್ಕೆ – 2 ಇಂಚು

   

ಇಷ್ಟು ಸಾಮಾನುಗಳನ್ನು ಬಿಸಿಲಿನಲ್ಲಿ ಒಣಗಿಸಿ, ನುಣ್ಣಗೆ ಪುಡಿ ಮಾಡಿ. ಹುರಿಯುವ ಅಗತ್ಯವಿಲ್ಲ. ಪುಡಿ ಮಾಡಿ ಜರಡಿ ಹಿಡಿದಿಡಿ.

ಆಮ್ ಚೂರ್ ಪುಡಿ – 2 ಟೇಬಲ್ ಚಮಚ
ಒಣ ಶುಂಠಿ ಪುಡಿ – 1 ಟೇಬಲ್ ಚಮಚ
ಕಾಲಾ ನಮಕ್ – 1 ಅಥವಾ 2 ಟೇಬಲ್ ಚಮಚ ( ನಿಮ್ಮ ರುಚಿಗೆ ತಕ್ಕ ಹಾಗೆ)
ಉಪ್ಪಿನ ಪುಡಿ – 1 ಟೇಬಲ್ ಚಮಚ

   

ಇಷ್ಟು ಪುಡಿಗಳನ್ನು ಮೇಲೆ ಪುಡಿ ಮಾಡಿದಕ್ಕೆ ಸೇರಿಸಿ, ಇನ್ನೊಮ್ಮೆ mixie ಯಲ್ಲಿ 2 ಸುತ್ತು ಸುತ್ತಿದರೆ ಸಾಕು. ರುಚಿಯಾದ, ತಾಜಾರುಚಿಯ ಚಾಟ್ ಮಸಾಲ ಪುಡಿ ಸಿದ್ಧ! ಗಾಳಿಯಾಡದ ಚಿಕ್ಕ ಡಬ್ಬದಲ್ಲಿ ಹಾಕಿ, ಬೇಕಾದಾಗ ಉಪಯೋಗಿಸಬಹುದು. ಆಮ್ ಚೂರ್ ಪುಡಿ, ಕಾಲಾ ನಮಕ್, ಮೆಣಸು ನಿಮ್ಮ ರುಚಿಗೆ ಬೇಕಾದ ಹಾಗೆ ಹಾಕಿಕೊಳ್ಳಿ.

ಧನ್ಯವಾದಗಳು.