CHAPATHI CUTLET ಚಪಾತಿ ಕಟ್ಲೆಟ್
ಅದರಿಂದ ರುಚಿಯಾದ ಕಟ್ಲೆಟ್ ಮಾಡುವ ರೆಸಿಪಿ ಇಲ್ಲಿದೆ!
ಮಾಡುವ ವಿಧಾನ:-
ಉಳಿದ ಚಪಾತಿಗಳನ್ನು ಬಿಸಿ ತವಾದ ಮೇಲೆ ಹಾಕಿ ಸ್ವಲ್ಪ ಗಟ್ಟಿಯಾಗಿ ಮಾಡಿಕೊಂಡು ಚಿಕ್ಕ ಚಿಕ್ಕದಾಗಿ ಕತ್ತರಿಸಿ ಪುಡಿ ಮಾಡಿಡಿ.
1 ಆಲೂಗೆಡ್ಡೆ, ಸ್ವಲ್ಪ ಬಟಾಣಿ ಬೇಯಿಸಿ, ಆಲೂಗೆಡ್ಡೆ ಸಿಪ್ಪೆ ತೆಗೆದು ಬಟಾಣಿ ಜೊತೆ ಪುಡಿ ಮಾಡಿಡಿ
1 ಈರುಳ್ಳಿ ಸಣ್ಣಗೆ ಹೆಚ್ಚಿಡಿ.
1 ಕ್ಯಾರೆಟ್ ತೊಳೆದು, ಸಿಪ್ಪೆ ತೆಗೆದು ತುರಿದಿಡಿ.
ಸ್ವಲ್ಪ ಕೊತ್ತಂಬರಿ ಸೊಪ್ಪು ಹೆಚ್ಚಿಡಿ.
ಚಪಾತಿ ಪುಡಿಗೆ ಆಲೂಗೆಡ್ಡೆ, ಬಟಾಣಿ, ಈರುಳ್ಳಿ, ಕ್ಯಾರೆಟ್ ತುರಿ, ಕೊತ್ತಂಬರಿ ಸೊಪ್ಪು, 1 ಚಮಚ ಖಾರಾ ಪುಡಿ, 1/2 ಚಮಚ ಚಾಟ್ ಮಸಾಲ, 1/2 ಚಮಚ ಆಮ್ ಚೂರ್ ಪುಡಿ, ಸ್ವಲ್ಪ ಉಪ್ಪು, 1 ಚಮಚ ಚಿರೋಟಿ ರವೆ ಹಾಕಿ ನೀರು ಹಾಕದೆ ಗಟ್ಟಿಯಾಗಿ ಕಲೆಸಿಡಿ.
ಒಂದು ತಟ್ಟೆಯಲ್ಲಿ ಸ್ವಲ್ಪ ಚಿರೋಟಿ ರವೆ ಹಾಕಿ. ಕಲೆಸಿದ ಮಿಶ್ರಣದಿಂದ ಚಿಕ್ಕ ಚಿಕ್ಕದಾಗಿ ಉಂಡೆ ಮಾಡಿ ಕಟ್ಲೆಟ್ ತರಹ ಆಕಾರ ಕೊಟ್ಚು ಚಿರೋಟಿ ರವೆಯಲ್ಲಿ ಹೊರಳಿಸಿ ಕಾದ ತವಾ ಮೇಲೆ ಸ್ವಲ್ಪ ಎಣ್ಣೆ ಹಾಕಿ ಕಟ್ಲೆಟ್ ಗಳನ್ನು ಜೋಡಿಸಿ ಮೇಲೆ ಸ್ವಲ್ಪ ಎಣ್ಣೆ ಹಾಕಿ ಕಡಿಮೆ ಉರಿಯಲ್ಲಿ ಗರಿ ಗರಿಯಾಗಿ ಬೇಯಿಸಿ ಟೊಮೇಟೋ ಸಾಸ್ ಜೊತೆ ಸವಿಯಿರಿ.
ಧನ್ಯವಾದಗಳು.