ಬ್ರೆಡ್ ದೋಸೆ ಮಾಡುವ ವಿಧಾನ:-
8 ಬ್ರೆಡ್ ಸ್ಲೈಸ್ ಗಳ ಅಂಚನ್ನು ತೆಗೆದು, (ನಾನು sand witch bread ಹಾಕಿದ್ದೇನೆ, ನೀವು ಬೇಕಾದರೆ multi grain, wheat bread ಹಾಕಬಹುದು, ದೋಸೆಯ ಬಣ್ಣ ಸ್ವಲ್ಪ ಬದಲಾಗಬಹುದು, ತೆಗೆದ ಅಂಚನ್ನು ಎಸೆಯಬೇಡಿ, ಕಾದ ಹೆಂಚಿನ ಮೇಲೆ 3 ಅಥವಾ 4 ನಿಮಿಷ ಹಾಕಿ ತಣ್ಣಗಾದ ಮೇಲೆ ಪುಡಿ ಮಾಡಿದರೆ bread crumbs ಆಗುತ್ತೆ) 1/2 ಚಿಕ್ಕ ಬಟ್ಟಲು ಅಕ್ಕಿ ಹಿಟ್ಟು, 1/2 ಚಿಕ್ಕ ಬಟ್ಟಲು ಚಿರೋಟಿ ರವೆ, ಉಪ್ಪು, ಸ್ವಲ್ಪ ಸಕ್ಕರೆ,1/2 ಲೋಟ ಮೊಸರು, 1/2 ಲೋಟ ನೀರು ಹಾಕಿ, 20 ನಿಮಿಷ ನೆನೆಯಲು ಬಿಡಿ, ನಂತರ ಮಿಕ್ಸಿಯಲ್ಲಿ ರುಬ್ಬಿ ಕೊಳ್ಳಿ, 4 ಸುತ್ತು ಸುತ್ತಿದರೆ ಸಾಕು, ಹೆಚ್ಚು ರುಬ್ಬುವ ಅಗತ್ಯವಿಲ್ಲ.
ದೋಸೆ ಹಿಟ್ಟಿನ ಹದಕ್ಕೆ ಬೇಕಾದರೆ ನೀರು ಸೇರಿಸಿ, ಕಾದ ಕಾವಲಿಯ ಮೇಲೆ ಸಾಧಾರಣ ದೋಸೆ ಯಂತೆ ದೋಸೆ ಮಾಡಿರಿ. ಇದು ಅಕ್ಕಿ ಉದ್ದಿನ ಬೇಳೆ ದೋಸೆಯಂತೆ ಗರಿ ಗರಿಯಾಗಿ ಬರದಿದ್ದರೂ, ಸೆಟ್ ದೋಸೆ ಅಥವಾ ಖಾಲಿ ದೋಸೆಯಂತೆ ಮೃದುವಾಗಿ, ರುಚಿಯಾಗಿರುತ್ತೆ, ಬೇಕರಿ ತಿನಿಸುಗಳನ್ನು ಯಾವಾಗಲೊಮ್ಮೆ ತಿನ್ನಬಹುದು ಎನ್ನುವುದು ನನ್ನ ಅಭಿಪ್ರಾಯ, ಬಿಸಿ ದೋಸೆಯನ್ನು, ಈರುಳ್ಳಿ ಚಟ್ನಿ ಮತ್ತು ಆಲೂ ಗೆಡ್ಡೆ ಪಲ್ಯ ಜೊತೆ ಬಡಿಸಿ.
ಯವಾಗಲೂ ಕಾಯಿ ಚಟ್ನಿ ತಿನ್ನುವವರಿಗೆ ಒಂದು ಬದಲಾವಣೆಗಾಗಿ ಈ ಚಟ್ನಿ.
ಈರುಳ್ಳಿ ಚಟ್ನಿ
ಮಾಡುವ ವಿಧಾನ:- 2 ಈರುಳ್ಳಿ ಹೆಚ್ಚಿ 1 ಚಮಚ ಎಣ್ಣೆ ಹಾಕಿ, ಹುರಿದುಕೊಳ್ಳಿ, ಈರುಳ್ಳಿ 50% ಬೆಂದರೆ ಸಾಕು. 7 ಅಥವಾ 8 ಬ್ಯಾಡಗಿ ಮೆಣಸಿನ ಕಾಯಿಯನ್ನು ಎಣ್ಣೆ ಹಾಕಿ ಹುರಿದು ಪುಡಿ ಮಾಡಿಟ್ಟುಕೊಳ್ಳಿ. ಈರುಳ್ಳಿ ತಣ್ಣಗಾದ ನಂತರ, ಖಾರಾ ಪುಡಿ, ಹುಣಿಸೆ ರಸ, ಉಪ್ಪು, ಕೊತ್ತಂಬರಿ ಸೊಪ್ಪು(ಬೇಕಿದ್ದಲ್ಲಿ ಚೂರು ಬೆಲ್ಲ ಹಾಕಿ, ನಾವು ಚಟ್ನಿಯಲ್ಲಿ ಬಳಸುವುದಿಲ್ಲ) ಹಾಕಿ, ಚಟ್ನಿ ಮಾಡಿ ದೋಸೆ, ಚಪಾತಿ, ಅನ್ನದೊಡನೆ ಬಡಿಸಿ.
ತೆಂಗಿನ ಕಾಯಿ ಇಲ್ಲದ, ರುಚಿಯಾದ ಚಟ್ನಿ, ಮಾಡಿ ನೋಡಿ.
ಧನ್ಯವಾದಗಳು.
Leave A Comment