ಹಬ್ಬ ಎಂದ ಮೇಲೆ ಸಿಹಿ ಇರಲೇ
ಬೇಕು. ಅದರಲ್ಲೂ ಸುಲಭವಾಗಿ ಮಾಡುವ ಸಿಹಿ ಇದ್ದರೆ ಇನ್ನೂ ಚೆಂದ. ಡ್ರೈ ಜಾಮೂನ್ ಸುಲಭವಾಗಿ ಮಾಡುವ ರೆಸಿಪಿ ಇಲ್ಲಿದೆ.

ಮಾಡುವ ವಿಧಾನ:-

1 ಅಳತೆ ಸಕ್ಕರೆಗೆ 1 ಅಳತೆ ನೀರು ಹಾಕಿ ಕುದಿಸಿ ಸಕ್ಕರೆ ಪಾಕ ಮಾಡಿ ಚಿಟಿಕೆ ಏಲಕ್ಕಿ ಪುಡಿ ಹಾಕಿ ಮುಚ್ಚಿಡಿ. ಎಳೆ ಪಾಕ ಬೇಕಿಲ್ಲ, ಸಕ್ಕರೆ ಕರಗಿದ ವೇಲೆ 3 ಅಥವಾ 4 ನಿಮಿಷ ಕಡಿಮೆ ಉರಿಯಲ್ಲಿ ಕುದಿಸಿದರೆ ಸಾಕು.

ಜಾಮೂನ್ ಮಿಕ್ಸ್ ಜರಡಿ ಹಿಡಿದು, 1 ಅಳತೆ ಪುಡಿಗೆ 1/4 ಅಳತೆ ನೀರು ಹಾಕಿ ಗಂಟಿಲ್ಲದ ಹಾಗೆ ಕಲೆಸಿಡಿ.

      

10 ಗೋಡಂಬಿ, 10 ಬಾದಾಮಿ, ಸ್ವಲ್ಪ ದ್ರಾಕ್ಷಿ ಚಿಕ್ಕ ಚಿಕ್ಕದಾಗಿ ಕಟ್ ಮಾಡಿ ಸ್ವಲ್ಪ ತುರಿದ ಪನ್ನೀರ್ , ಸ್ವಲ್ಪ ಸಕ್ಕರೆ ಪುಡಿ ಹಾಕಿ ಕಲೆಸಿಡಿ.

ಸ್ವಲ್ಪ ಒಣ ಕೊಬ್ಬರಿ ಪುಡಿ ಮಾಡಿಡಿ.

      

ಕೈಗೆ ತುಪ್ಪ ಸವರಿ ಜಾಮೂನ್ ಮಿಶ್ರಣ ದಿಂದ ಚಿಕ್ಕ ಉಂಡೆ ತೆಗೆದು ಕೊಂಡು ಕೈಯಿಂದ ತಟ್ಟಿ ಮಧ್ಯದಲ್ಲಿ ಚಿಕ್ಕ Dry fruits ಮಿಶ್ರಣ ಇಟ್ಟು ಮಡಚಿ ಗುಂಡಗೆ ಮಾಡಿ ಕಾದ ಎಣ್ಣೆಗೆ ಹಾಕಿ ಕಡಿಮೆ ಉರಿಯಲ್ಲಿ ಕೆಂಪಗೆ ಕರಿದು ಸಕ್ಕರೆ ಪಾಕದಲ್ಲಿ ಹಾಕಿ 30 ನಿಮಿಷ ನೆನೆಯಲು ಬಿಡಿ.

ನೆಂದ ಜಾಮೂನುಗಳನ್ನು ಸಕ್ಕರೆ ಪಾಕದಿಂದ ತೆಗೆದು ಸ್ವಲ್ಪ ಸೋರಿ ಹಾಕಿ. ಕೊಬ್ಬರಿ ಪುಡಿಯಲ್ಲಿ ಹೊರಳಿಸಿ Fridge ನಲ್ಲಿ ತಣ್ಣಗಾಗಲು 1 ಗಂಟೆ ಕಾಲ ಇಟ್ಟು ನಂತರ ಸವಿಯಿರಿ.

ಒಣ ಕೊಬ್ಬರಿ ಪುಡಿಯೊಂದಿಗೆ ಬೇಕಾದರೆ ಸ್ವಲ್ಪ ಸಕ್ಕರೆ ಪುಡಿ ಸೇರಿಸಿ ಕೊಳ್ಳಬಹುದು.

ಧನ್ಯವಾದಗಳು.