SIHI MATTHU KHARA HOLIGE ಸಿಹಿ ಮತ್ತು ಖಾರಾ ಹೋಳಿಗೆ ( ಹಬ್ಬದ ವಿಶೇಷ)
1 ತೆಂಗಿನ ಕಾಯಿ ತುರಿದಿಡಿ.
1/4 ಕೇಜಿ ಮೈದಾ, ಚಿಟಿಕೆ ಅರಿಶಿಣ, ಚಿಟಿಕೆ ಉಪ್ಪು , ಸ್ವಲ್ಪ ಎಣ್ಣೆ ಹಾಕಿ ಮೆತ್ತಗೆ ಕಲೆಸಿ ಮೇಲೆ ಸ್ವಲ್ಪ ಎಣ್ಣೆ ಹಾಕಿ 1 ಗಂಟೆ ಮುಚ್ಚಿಡಿ
1/2 ಕೇಜಿ ಬೆಲ್ಲ ತುರಿದಿಡಿ.
ಬೆಂದ ಬೇಳೆ, ಬೆಲ್ಲದ ಪುಡಿ, ಕಾಯಿ ತುರಿ, ಚಿಟಿಕೆ ಏಲಕ್ಕಿ ಪುಡಿ ಹಾಕಿ ಬಾಣಲೆಯಲ್ಲಿ ನೀರಿನಂಶ ಹೋಗುವವರೆಗೆ ಬಾಡಿಸಿ, ಸ್ವಲ್ಪ ತಣ್ಣಗಾದ ಮೇಲೆ ನುಣ್ಣಗೆ ರುಬ್ಬಿಡಿ.
ಮೈದಾ ಹಿಟ್ಟನ್ನು ಮತ್ತಷ್ಟು ಚೆನ್ನಾಗಿ ನಾದಿ, ಚಿಕ್ಕ ಉಂಡೆ ತೆಗೆದು ಕೊಂಡು ತಟ್ಟಿ ಮಧ್ಯದಲ್ಲಿ ಹೂರಣದ ಉಂಡೆ ಇಟ್ಟು ಮಡಚಿ ಬಾಳೆ ಎಲೆ ಅಥವಾ ಬಟರ್ಆ ಪೇಪರ್ ಮೇಲೆ ಸ್ವಲ್ಪ ಎಣ್ಣೆ ಹಾಕಿ ಆದಷ್ಟೂ ತೆಳ್ಳಗೆ ಹೋಳಿಗೆ ತಟ್ಟಿ ಕಾದ ಕಾವಲಿಯ ಮೇಲೆ ಎರಡೂ ಕಡೆ ಸ್ವಲ್ಪ ಎಣ್ಣೆ ಹಾಕಿ ಬೇಯಿಸಿ.
ಖಾರಾ ಹೋಳಿಗೆ
ಸಾಮಾನ್ಯವಾಗಿ ಎಲ್ಲರೂ ಸಿಹಿ ಹೋಳಿಗೆ ಮಾಡುತ್ತಾರೆ. ಸ್ವಲ್ಪ ಬದಲಾವಣೆಗಾಗಿ ಖಾರಾ ಹೋಳಿಗೆ ಮಾಡಿ ನೋಡಿ!
ಮಾಡುವ ವಿಧಾನ:-
ಸಿಹಿ ಹೋಳಿಗೆ ಹಾಗೆ ಕಣಕ ಕಲೆಸಿಡಿ.
ಬೆಂದ ಬೇಳೆಗೆ 4 ಹಸಿ ಮೆಣಸಿನ ಕಾಯಿ, 6 ಚಮಚ ಕಾಯಿ ತುರಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಉಪ್ಪು ಹಾಕಿ ನುಣ್ಣಗೆ ರುಬ್ಬಿ, ಬಾಣಲೆಯಲ್ಲಿ ಹಾಕಿ ನೀರಿನಂಶ ಹೋಗುವವರೆಗೆ ಬಾಡಿಸಿ.
ಮೈದಾ ಹಿಟ್ಟನ್ನು ಚಿಕ್ಕ ಉಂಡೆ ಮಾಡಿ ಖಾರದ ಹೂರಣದ ಉಂಡೆ ಇಟ್ಟು ಸಾಧಾರಣ ಹೋಳಿಗೆ ಹಾಗೇ ಮಾಡಿ.
ಹೋಳಿಗೆ ಸಾರು ಮಾಡುವ ವಿಧಾನ:-
ಬೇಳೆ ಬೆಂದ ಸೋರಿ ಹಾಕಿದ ಬೇಳೆ ಕಟ್ಟಿಗೆ 2 ಚಮಚ ಸಾರಿನ ಪುಡಿ, 2 ಚಮಚ ಹುಣಿಸೆ ರಸ, ಉಪ್ಪು, ಸ್ವಲ್ಪ ಸಿಹಿ ಹೂರಣ ಹಾಕಿ ಚೆನ್ನಾಗಿ ಕಲೆಸಿ ಕುದಿಸಿ ಕೊನೆಯಲ್ಲಿ ಒಗ್ಗರಣೆಗೆ ಸಾಸಿವೆ, ಇಂಗು, ಕರಿ ಬೇವು ಹಾಕಿ ಕುದಿಸಿದ ಸಾರಿಗೆ ಹಾಕಿದರೆ ರುಚಿಯಾದ ಹೋಳಿಗೆ ಸಾರು ಸಿದ್ಧ!
ಬದಲಾವಣೆ ಬೇಕಾದರೆ, 1 ಈರುಳ್ಳಿ ಸಣ್ಣಗೆ ಹೆಚ್ಚಿಡಿ, 1/2 ಚಮಚ ಜೀರಿಗೆ, ಸ್ವಲ್ಪ ಎಣ್ಣೆ ಹಾಕಿ ಹುರಿದು, 4 ಚಮಚ ಕಾಯಿ ತುರಿ ಹಾಕಿ ನುಣ್ಣಗೆ ರುಬ್ಬಿ, ಮೇಲೆ ಹೇಳಿದ ಸಾರಿನ ಹಾಗೇ ಮಾಡಬಹುದು.
ಧನ್ಯವಾದಗಳು.