ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ, ಮಾಡುವ ಸಿಹಿ ತಿಂಡಿ!!! ನಾನು ಸ್ವಲ್ಪ ಬದಲಾವಣೆ ಮಾಡಿದ್ದೇನೆ.

ಮಾಡುವ ವಿಧಾನ:-

1 ಕಪ್ ಕಾಯಿ ತುರಿದಿಡಿ.
1 ಕಪ್ ಬಾದಾಮಿ, ಗೋಡಂಬಿ ಸೇರಿಸಿ ಪುಡಿ ಮಾಡಿಡಿ.
1 ಕಪ್ ಕಡಲೇ ಹಿಟ್ಟು ಘಮ್ ಎಂದು ವಾಸನೆ ಬರುವವರೆಗೆ ಹುರಿದಿಡಿ.

   

ದಪ್ಪ ತಳದ ಬಾಣಲೆಯಲ್ಲಿ ಹುರಿದ 1 ಕಪ್ ಕಡಲೇ ಹಿಟ್ಟು, 1 ಕಪ್ ಬಾದಾಮಿ, ಗೋಡಂಬಿ ಪೂಡಿ, 1 ಕಪ್ ತುಪ್ಪ, 1 ಕಪ್ ಹಾಲು, 1 ಕಪ್ ಕಾಯಿ ತುರಿ, 2 ಕಪ್ ಸಕ್ಕರೆ ಹಾಕಿ ಮಧ್ಯಮ ಉರಿಯಲ್ಲಿ
ಕಲೆಸುತ್ತಾ ಇರಿ. ಮಿಶ್ರಣ ಗಟ್ಟಿಯಾಗಿ ಅಂಚನ್ನು ಬಿಡುತ್ತಾ ಬಂದಾಗ, ಚಿಟಿಕೆ ಏಲಕ್ಕಿ ಪುಡಿ ಹಾಕಿ ಕಲೆಸಿ, ಒಲೆಯಿಂದ ತೆಗೆದು ತುಪ್ಪ ಸವರಿದ ಬಟರ್ ಪೇಪರ್ ಮೇಲೆ ಹಾಕಿ ಹರಡಿ, ಸ್ವಲ್ಪ ತಣ್ಣಗಾದ ಮೇಲೆ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ ಸವಿಯಿರಿ.

       

ಬಾದಾಮಿ, ಗೋಡಂಬಿ ಹಾಕುವುದರಿಂದ ರುಚಿ ಮತ್ತಷ್ಟು ಚೆನ್ನಾಗಿರುತ್ತದೆ!

ಧನ್ಯವಾದಗಳು.