ಮೂಲಂಗಿ ಒಂದು ಅದ್ಭುತವಾದ ತರಕಾರಿ, ಅದರಲ್ಲಿ ಆರೋಗ್ಯ ಸುಧಾರಿಸುವ ಅಂಶಗಳು ಸಾಕಷ್ಟು ಇದೆ. ಮೂಲಂಗಿಯನ್ನು ಹಸಿಯಾಗಿ ಆಗಲಿ, ಬೇಯಿಸಿ ಆಗಲಿ ನಿಯಮಿತವಾಗಿ ಉಪಯೋಗಿಸಿದರೆ, ಮಧು ಮೇಹ, ಅಧಿಕ ರಕ್ತ ದೊತ್ತಡವನ್ನು ಹತೋಟಿಯಲ್ಲಿ ಇಡಬಹುದು, ಜಾಂಡೀಸ್ ಅನ್ನು ಕಡಿಮೆ ಮಾಡುತ್ತದೆ, constipation ಮತ್ತು piles ಇರುವವರಿಗೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ, ನಾರಿನಂಶ ಹೆಚ್ಚು ಇರುವ ಇದನ್ನು ಹೆಚ್ಚು ಹೆಚ್ಚು ಉಪಯೋಗಿಸಿದಷ್ಟು ಒಳ್ಳೆಯದು, ಇದರ ಎಲೆ ಮತ್ತು ಕಾಯಿ ಸಹ ಉತ್ತಮವಾದದ್ದು, ಮೂಲಂಗಿ ಎಂದೊಡನೆ ಮೂಗು ಮುರಿಯುವವರೆ ಜಾಸ್ತಿ! ಅದು ಬೇಯುವ ವಾಸನೆ ಕೆಲವರಿಗೆ ಇಷ್ಟವಿಲ್ಲ, ಅಂತಹವರಿಗಾಗಿ ಈ ರೆಸಿಪಿ.

ಮೂಲಂಗಿ ಚಟ್ನಿ ಮಾಡುವ ವಿಧಾನ:-

      

4 ಮೂಲಂಗಿಯನ್ನು ತೊಳೆದು ಸಿಪ್ಪೆ ತೆಗೆದು, ಚಿಕ್ಕದಾಗಿ ಹೆಚ್ಚಿ, 1 ಚಮಚ ಎಣ್ಣೆ ಹಾಕಿ, 2 ಅಥವಾ 3 ಹಸಿ ಮೆಣಸಿನ ಕಾಯಿ (ಖಾರಾ ಹೆಚ್ಚು ಬೇಡ, ಮೂಲಂಗಿಯ ಖಾರವೇ ಸಾಕಾಗುತ್ತೆ), 4 ಎಸಳು ಬೆಳ್ಳುಳ್ಳಿ (optional) ಜೊತೆ ಸ್ವಲ್ಪ ಹುರಿದು ಕೊಳ್ಳಿ, ತಣ್ಣಗಾದ ಮೇಲೆ 4 ಚಮಚ ಕಾಯಿ ತುರಿ, ಹುಣಿಸೆ ರಸ, ಉಪ್ಪು, ಕೊತ್ತಂಬರಿ ಸೊಪ್ಪು ಜೊತೆ ರುಬ್ಬಿ ಕೊಂಡರೆ ರುಚಿಯಾದ, ಆರೋಗ್ಯಕರ ಮೂಲಂಗಿ ಚಟ್ನಿ ರೆಡಿ.

 

ರಾಗಿ ರೊಟ್ಟಿ ಮಾಡುವ ವಿಧಾನ:-

ದಿನಾ ಚಪಾತಿ ತಿಂದು ಬೇಸರವಾಗಿದ್ದರೆ ಒಮ್ಮೆ ಈ ರೊಟ್ಟಿ ಮಾಡಿ ನೋಡಿ, ಬಾಣಲೆಯಲ್ಲಿ 1 1/2 ಲೋಟ ನೀರು ಸ್ವಲ್ಪ ಉಪ್ಪು ಹಾಕಿ, ಬಿಸಿಯಾಗಲು ಇಡಿ, ನೀರು ಗುಳ್ಳೆ ಬರಲು ಆರಂಭವಾದಾಗ 1 ಲೋಟ ರಾಗಿ ಹಿಟ್ಟು ಹಾಕಿ ಕಲೆಸಿ, ತಟ್ಟೆ ಮುಚ್ಚಿ 5 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ.

      

ಒಲೆಯಿಂದ ತೆಗೆದು, ಕೈಯಲ್ಲಿ ಮುಟ್ಟುವಷ್ಚು ಬಿಸಿ ಇರುವಾಗ ಚೆನ್ನಾಗಿ ನಾದಿ ಚಪಾತಿ ಉಂಡೆಯಷ್ಟು ಹಿಟ್ಟು ತೆಗೆದು ಕೊಂಡು, ತೆಳ್ಳಗೆ ಲಟ್ಟಿಸಿ, ಕಾದ ಕಾವಲಿಯ ಮೇಲೆ ಹಾಕಿ ಎರಡು ಕಡೆ ಬೇಯಿಸಿದರೆ, ಮೃದುವಾದ, ರುಚಿಯಾದ ರಾಗಿ ರೊಟ್ಟಿ, ಮೂಲಂಗಿ ಚಟ್ನಿಯ ಜೊತೆ ಸವಿಯಲು ಸಿದ್ಧ!

ಧನ್ಯವಾದಗಳು