PALAK MANCHOORI ಪಾಲಾಕ್ ಮಂಚೂರಿ
Indu Jayaram
SHARE
ಗೋಭಿ ಮಂಚೂರಿ, ಪನ್ನೀರ್ ಮಂಚೂರಿ, ವೆಜ್ ಮಂಚೂರಿ ತಿಂದು ಬೇಜಾರಾಗಿದೆಯೇ? ಹಾಗಾದರೆ ಒಮ್ಮೆ ಪಾಲಾಕ್ ಮಂಚೂರಿ ತಿಂದು ನೋಡಿ.
ಮಾಡುವ ವಿಧಾನ :-
3 ರಿಂದ 4 ಕಟ್ಟು ಪಾಲಾಕ್ ತೊಳೆದು ಸಣ್ಣಗೆ ಹೆಚ್ಚಿಡಿ.
50 ಗ್ರಾಂ ಪನ್ನೀರ್ ತುರಿದಿಡಿ.
1 ಈರುಳ್ಳಿ ಸಣ್ಣಗೆ ಹೆಚ್ಚಿಡಿ.
2 ಬೆಳ್ಳುಳ್ಳಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ.
4 ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ.
ಸಣ್ಣಗೆ ಹೆಚ್ಚಿದ ಪಾಲಕ್, ತುರಿದ ಪನ್ನೀರ್ , 4 ಚಮಚ ಮೈದಾ, 4 ಚಮಚ ಕಾರ್ನ್ ಹಿಟ್ಟು, ಖಾರದ ಪುಡಿ 1 ಚಮಚ, ರುಚಿಗೆ ಉಪ್ಪು ಹಾಕಿ ನೀರು ಸೇರಿಸದೆ ಗಟ್ಟಿಯಾಗಿ ಕಲಸಿ, ಚಿಕ್ಕ ಚಿಕ್ಕ ಉಂಡೆಗಳಾಗಿ ಮಾಡಿ ಗರಿ ಗರಿಯಾಗಿ ಕರೆಯಿರಿ.
ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ, ಹೆಚ್ಚಿದ ಈರುಳ್ಳಿ, ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ, ಟೋಮೇಟೋ ಸಾಸ್, ಸೋಯಾ ಸಾಸ್, ವಿನೆಗರ್ 1 ಚಮಚ ಹಾಕಿ, ಕರಿದ ಉಂಡೆ ಹಾಕಿ ಕಲೆಸಿ, ಕೊನೆಯಲ್ಲಿ ಕೊತ್ತಂಬರಿ ಹಾಕಿ ಬಿಸಿಯಾಗಿ ಬಡಿಸಿ.
ಕರಿದ ಉಂಡೆಗಳು ಹಾಗೆಯೇ ತಿನ್ನಲು ಪಕೋಡದಂತೆ ರುಚಿಯಾಗಿರುತ್ತದೆ.
ಧನ್ಯವಾದಗಳು.