PAAN SHOT / PAAN MILK SHAKE ಪಾನ್ ಷಾಟ್ / ಪಾನ್ ಮಿಲ್ಕ್ ಶೇಕ್

Categories: Kannada, Tindi TinisuPublished On: November 25, 20170 Comments0.3 min read
Indu Jayaram
SHARE
ವೀಳೆದೆಲೆಯನ್ನು ಏಷಿಯಾ ಖಂಡದಲ್ಲಿ ಹೆಚ್ಚು ಉಪಯೋಗಿಸುತ್ತಾರೆ. ಅದರಲ್ಲಿರುವ ಸತ್ವಗಳು ಅಪಾರ. ವೀಳೆದೆಲೆಯನ್ನು ಒಳ್ಳೆಯ ಅಡಿಕೆ ಮತ್ತು ಸುಣ್ಣದೊಂದಿಗೆ ನಿಯಮಿತವಾಗಿ ತಿಂದರೆ, ಮಧು ಮೇಹವನ್ನು ಹತೋಟಿಯಲ್ಲಿಡುವುದು, ಕ್ಯಾನ್ಸರ್ ವಿರುದ್ಧ ಹೋರಾಡುವುದು, ಗಾಯಗಳನ್ನು ಒಣಗಿಸುವ ಶಕ್ತಿ ಇದೆ, ಬಾಯಿಯ ದುರ್ಗಂಧವನ್ನು ಹೋಗಲಾಡಿಸುವುದು. ಒಳ್ಳೆಯ ಭೋಜನದ ನಂತರ ತಿಂದರೆ ಜೀರ್ಣ ಕ್ರಿಯೆಯಲ್ಲಿ ಸಹಕರಿಸುವುದು. ಹಿಂದೆಲ್ಲಾ ಊಟದ ನಂತರ ಗಂಡ ಹೆಂಡತಿ ಸವಿ ಮಾತನ್ನು ಆಡುತ್ತಾ ಎಲೆ ಅಡಿಕೆ ಮೆಲ್ಲುತ್ತಿದ್ದರು! ಕೆಲವರಿಗೆ “ಮುದ್ದಣ್ಣ ಮನೋರಮೆಯರ ಸಲ್ಲಾಪ” ಪಾಠ ಜ್ಞಾಪಕ ಬರ್ತಾ ಇರಬಹುದು!!! ಈಗಿನ ಧಾವಂತದ ಬದುಕಿನಲ್ಲಿ ತಾಂಬೂಲ ಮೆಲ್ಲಲು ಸಮಯವಿಲ್ಲ! ಹಾಗಾದರೆ ಈ ರೆಸಿಪಿ ಮಾಡಿ ನೋಡಿ.

ಪಾನ್ ಷಾಟ್

ಮಾಡುವ ವಿಧಾನ:- 4 ವೀಳೆದೆಲೆ ತೊಳೆದು ತೊಟ್ಟು ಕತ್ತರಿಸಿ, 2 ಚಮಚ ಗುಲ್ಕಂದ್ ಹಾಕಿ ಸ್ವಲ್ಪ ರುಬ್ಬಿ ಕೊಳ್ಳಿ, (ನೀರು ಸೇರಿಸ ಬೇಡಿ), ನಂತರ 4 ಚಮಚ ವೆನಿಲ್ಲಾ ಐಸ್ ಕ್ರೀಮ್, 1 ಲೋಟ ತಣ್ಣನೆ ಹಾಲು (chilled milk) ಹಾಕಿ 2 ಸುತ್ತು ರುಬ್ಬಿ ತಕ್ಷಣ ಕುಡಿಯಿರಿ, ಮಾಡಿಟ್ಟರೆ ಕಪ್ಪಾಗುವುದು, ರುಚಿ ಕೂಡ ಚೆನ್ನಾಗಿರುವುದಿಲ್ಲ, ಹೀಗೆ ಮಾಡಿದ ಪಾನೀಯ ಇಬ್ಬರಿಗೆ ಸಾಕಾಗುವುದು.

   

ಬೀಡಾ, ಎಲೆ ಅಡಿಕೆ ಅಭ್ಯಾಸ ಇರುವವರಿಗೆ ಈ ರೆಸಿಪಿ ಇಷ್ಟ ಆಗುತ್ತೆ, ದೇಹಕ್ಕೆ ಹಿತ ನೀಡುವ ಈ ಪಾನೀಯವನ್ನು ಒಮ್ಮೆ ಮಾಡಿ ನೋಡಿ. ಬೆಂಗಳೂರಿನ North Indian style hotel ಗಳಲ್ಲಿ ಇದನ್ನು ಊಟದ ಕೊನೆಯಲ್ಲಿ ಕುಡಿಯಲು ಕೊಡುತ್ತಾರೆ.

ಧನ್ಯವಾದಗಳು.

About the Author: Indu Jayaram

Indu Jayaram is a homemaker and regularly writes on home cooked food. She has more than 10,000 followers in her facebook page https://www.facebook.com/pg/indumathijayaram/

Leave A Comment