ವಿಶೇಷ ರುಚಿಯ ಗ್ರೇವಿ. ರುಚಿ ಮತ್ತು ಹೆಸರು ಎರಡೂ Rich! ಮಾಡುವ ವಿಧಾನ ನೋಡೋಣವೇ?

ನಿಮಗೆ ಇಷ್ಟವಾದ ತರಕಾರಿಗಳನ್ನು ಸಣ್ಣಗೆ ಹೆಚ್ಚಿಡಿ.

1 ಈರುಳ್ಳಿ ಸಣ್ಣಗೆ, ಉದ್ದಕ್ಕೆ ಹೆಚ್ಚಿಡಿ.

2 ಚಮಚ ಗಸಗಸೆ, 14 ಬಾದಾಮಿ, 14 ಗೋಡಂಬಿ, 2 ಚಮಚ ಕಲ್ಲಂಗಡಿ ಹಣ್ಣಿನ ಬೀಜ ಬಿಸಿ ನೀರಿನಲ್ಲಿ ನೆನೆಸಿಡಿ. ಬಾದಾಮಿಯ ಸಿಪ್ಪೆ ತೆಗೆದು ಮಿಕ್ಕ ಸಾಮಗ್ರಿಗಳೊಂದಿಗೆ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಡಿ. (ಕಲ್ಲಂಗಡಿ ಬೀಜ ಅಂಗಡಿಯಲ್ಲಿ ಸಿಗುತ್ತೆ. ಹಾಕದಿದ್ದರೂ ಪರ್ವಾಗಿಲ್ಲ)

   

ದಪ್ಪ ತಳದ ಬಾಣಲೆ/ ಕುಕ್ಕರಿನಲ್ಲಿ 4 ಚಮಚ ತುಪ್ಪ ಹಾಕಿ 1 ಇಂಚು ಚಕ್ಕೆ; ಲವಂಗ, ಏಲಕ್ಕಿ, ಪಲಾವ್ ಎಲೆ, ಜಾ ಪತ್ತೆ, ಜೀರಿಗೆ ಹಾಕಿ ಹುರಿದು, ಹೆಚ್ಚಿದ ಈರುಳ್ಳಿ ಹಾಕಿ ಸ್ವಲ್ಪ ಬಾಡಿಸಿ, 1 ಚಮಚ Ginger Garlic Paste, ಅರಿಷಿಣ, 1 ಚಮಚ ಖಾರಾ ಪುಡಿ, ರುಬ್ಬಿದ ಮಿಶ್ರಣವನ್ನು ಹಾಕಿ ಕುದಿಸಿ, ಹೆಚ್ಚಿದ ತರಕಾರಿಗಳನ್ನು ಹಾಕಿ, ಉಪ್ಪು, ಸ್ವಲ್ಪ ನೀರು ಹಾಕಿ ತಟ್ಟೆ ಮುಚ್ಚಿ ತರಕಾರಿ ಪೂರ್ತಿಯಾಗಿ ಬೇಯಲು ಬಿಡಿ. ಆಗಾಗ ಕಲೆಸುತ್ತಾ ಇರಿ. ತರಕಾರಿಗಳು ಪೂರ್ತಿಯಾಗಿ ಬೆಂದ ಮೇಲೆ, ಸ್ವಲ್ಪ ಗರಂ ಮಸಾಲ, ಚಮಚ ಫ್ರೆಶ್ ಕ್ರೀಮ್ ಹಾಕಿ ಕಲೆಸಿ, ಹೆಚ್ಚಿದ ಕೊತ್ತಂಬರಿ ಸೊಪ್ಪು, ತುಪ್ಪದಲ್ಲಿ ಹುರಿದ ಗೋಡಂಬಿ, ಬಾದಾಮಿ, ದ್ರಾಕ್ಷಿ, ಸಣ್ಣಗೆ ಹೆಚ್ಚಿದ ಪೈನಾಪಲ್ ( ಬೇಕಿದ್ದಲ್ಲಿ ಹಾಕಿ; ನಾನು ಹಾಕಿಲ್ಲ) ಹಾಕಿ ಅಲಂಕರಿಸಿದರೆ, ಬಾಯಲ್ಲಿ ನೀರೂರಿಸುವ ನವರಥನ್ ಕೂರ್ಮ ಸಿದ್ಧ!

   

ಚಪಾತಿ, ಪೂರಿ, ರೋಟಿ, ಕುಲ್ಚಾ ಜೊತೆಗೆ ತುಂಬಾ ರುಚಿಯಾಗಿರುತ್ತದೆ.

ಧನ್ಯವಾದಗಳು.