ತರಕಾರಿಗಳ ಸಾಗು ದೋಸೆ, ಚಪಾತಿ, ಪೂರಿಯ ಜೊತೆ ತುಂಬಾ ಚೆನ್ನಾಗಿರುತ್ತದೆ.

ಈ ರೆಸಿಪಿ ಸ್ವಲ್ಪ ವಿಶೇಷವಾಗಿದೆ! ಒಮ್ಮೆ ಮಾಡಿ ನೋಡಿ!

ಮಾಡುವ ವಿಧಾನ:-

1/2 ಹೋಳು ತೆಂಗಿನ ಕಾಯಿ ತುರಿದು,(ಒಡೆದ ಕಾಯಿಯ ದೊಡ್ಡ ಭಾಗ) ಸ್ವಲ್ಪ ನೀರು ಹಾಕಿ ಗಟ್ಟಿಯಾದ ಕಾಯಿ ಹಾಲು ತೆಗೆದಿಡಿ. ಮೊದಲು ತೆಗೆದ ಹಾಲು ಹಾಗೆ ಇಟ್ಟು, ಮತ್ತೊಂದು ಬಾರಿ ರುಬ್ಬಿ ಎರಡನೇ ಬಾರಿ ತೆಗೆದ ಹಾಲನ್ನು ತರಕಾರಿ ಬೇಯಿಸಲು ಹಾಕಿ.

ನಿಮಗೆ ಬೇಕಾದ ತರಕಾರಿಗಳನ್ನು ತೊಳೆದು ಚಿಕ್ಕದಾಗಿ ಹೆಚ್ಚಿ ಬೇಯಿಸಿ ಇಟ್ಟುಕೊಳ್ಳಿ.

      

2 ಚಮಚ ಗಸಗಸೆ, 1 ಚಮಚ ಧನಿಯ ಹುರಿದು, 1 ಚಮಚ ಹುರಿಗಡಲೆ ಜೊತೆಗೆ ಪುಡಿ ಮಾಡಿ, ನಿಮಗೆ ಬೇಕಾಗುವಷ್ಟು ಹುರಿದ ಬ್ಯಾಡಗಿ ಮೆಣಸಿನಕಾಯಿ ಜೊತೆಗೆ ನುಣ್ಣಗೆ ರುಬ್ಬಿಡಿ.

1 ಈರುಳ್ಳಿ ಸಣ್ಣಗೆ ಹೆಚ್ಚಿಡಿ.

   

ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ, ಈರುಳ್ಳಿ, ಜೀರಿಗೆ, ಚಿಟಿಕೆ ಅರಿಶಿಣ ಹಾಕಿ ಬಾಡಿಸಿ, ರುಬ್ಬಿದ ಮಿಶ್ರಣವನ್ನು ಹಾಕಿ ಕುದಿಸಿ, ಬೆಂದ ತರಕಾರಿಗಳು, ಉಪ್ಪು ಹಾಕಿ ಕುದಿಸಿ, ಕೊನೆಯಲ್ಲಿ ಗಟ್ಟಿಯಾದ ಕಾಯಿ ಹಾಲು ಹಾಕಿ ಸ್ವಲ್ಪ ಕುದಿಸಿ, ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿದರೆ, ರುಚಿಯಾದ, ಬಾಯಲ್ಲಿ ನೀರೂರಿಸುವ ಮಿಕ್ಸ್ ವೆಜ್ ಸಾಗು ಇನ್ ಕೋಕೋನಟ್ ಮಿಲ್ಕ್ ಸಿದ್ಧ!

ಹುಳಿ ಬೇಕಾದರೆ ನಿಂಬೆ ರಸ ಹಾಕಿ ಕೊಳ್ಳಬಹುದು!

ಧನ್ಯವಾದಗಳು.