ಪೀನಟ್ ಅಂದರೆ ಕಡಲೇ ಬೀಜವನ್ನು ಬಡವರ ಬಾದಾಮಿ ಎಂದೇ ಹೇಳಬಹುದು! ಎಲ್ಲರೂ ಇಷ್ಟ ಪಟ್ಟು ತಿನ್ನುವರು. ಸಿಹಿ ಆಗಲಿ ಖಾರಾ ಆಗಲಿ ಎರಡಕ್ಕೂ ಸೈ! ರುಚಿಯಾದ ಮಸಾಲ ಪೀನಟ್ ಮಾಡುವ ರೆಸಿಪಿ ಇಲ್ಲಿದೆ!

ಬಟ್ಟಲಿನಲ್ಲಿ ಕಡಲೇ ಬೀಜ ಹಾಕಿ, 4 ಚಮಚ ಕಡಲೇ ಹಿಟ್ಟು, 2 ಚಮಚ ಅಕ್ಕಿ ಹಿಟ್ಟು, 1 ಚಮಚ ಖಾರಾ ಪುಡಿ, ಸ್ವಲ್ಪ ಇಂಗು, 1/2 ಚಮಚ ಆಮ್ ಚೂರ್ ಪುಡಿ, 1/2 ಚಮಚ ಚಾಟ್ , ಉಪ್ಪು ಹಾಕಿ ಕಲೆಸಿ ಸ್ವಲ್ಪ ನೀರು ಚಿಮುಕಿಸಿ ಕಲೆಸಿಡಿ.

   

ಕಡಲೇ ಬೀಜದ ಮೇಲೆ ಹಿಟ್ಟಿನ ಕೋಟಿಂಗ್ ಬಂದರೆ ಸಾಕು. ಹೆಚ್ಚು ನೀರು ಹಾಕಬೇಡಿ. ಕೊನೆಯಲ್ಲಿ 1/2 ಚಮಚ ಗಸಗಸೆ ಉದುರಿಸಿ.

ಕಾದ ಎಣ್ಣೆಯಲ್ಲಿ ಬಿಡಿ ಬಿಡಿಯಾಗಿ ಸ್ವಲ್ಪ ಸ್ವಲ್ಪವೇ ಹಾಕುತ್ತಾ ಗರಿ ಗರಿಯಾಗಿ ಆಗುವವರೆಗೆ ಕರಿದು, ಹೆಚ್ಚಿನ ಎಣ್ಣೆ ತೆಗೆಯಲು ಕಿಚನ್ ಟವೆಲ್ ಮೇಲೆ ಹಾಕಿ ನಂಥಲ ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ವಾರವಾದರೂ ಗರಿ ಗರಿಯಾಗಿರುತ್ತದೆ.

   

ಸಂಜೆ ವೇಳೆಗೆ ಸಿಸಿ ಬಿಸಿ ಕಾಫಿ ಅಥವಾ ಟೀ ಜೊತೆಗೆ ಚೆನ್ನಾಗಿರುತ್ತದೆ.

ಧನ್ಯವಾದಗಳು.