ಬೇಸಿಗೆಯಲ್ಲಿ ಎಲ್ಲಡೆ ಮಾವಿನದೇ ದರ್ಬಾರು! ಮಾವಿನ ಕಾಯಿಯಾಗಲಿ, ಹಣ್ಣಾಗಲಿ ಅದರ ಸುವಾಸನೆಗೆ ಮನಸೋಲದವರಿಲ್ಲ! ಬಹಳ ಜನರಿಗೆ ಮಾವಿನ ಕಾಯಿಯ ಹುಳಿ ಇಷ್ಟ ಆಗುತ್ತೆ. ಅಂತಹವರಿಗಾಗಿ ಈ ರೆಸಿಪಿ. ತೋತಾಪುರಿ ಉಪಯೋಗಿಸಿದರೆ ತುಂಬಾ ಹುಳಿ ಇರುವುದಿಲ್ಲ.

ಮ್ಯಾಂಗೋ ದಾಲ್

ಮಾಡುವ ವಿಧಾನ:- ದೋರೆಯಾದ ತೋತಾಪುರಿ ಮಾವಿನ ಕಾಯಿಯನ್ನು ಆಯ್ಕೆ ಮಾಡಿಕೊಳ್ಳಿ‌.( ಕಾಯಿಯೂ ಅಲ್ಲದ, ಹಣ್ಣೂ ಅಲ್ಲದ್ದನ್ನು ದೋರೆಗಾಯಿ ಎನ್ನುತ್ತಾರೆ) ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿ ಕೊಳ್ಳಿ, ಕುಕ್ಕರಿನಲ್ಲಿ 1 ಬಟ್ಟಲು ತೊಗರಿ ಬೇಳೆ ಹಾಕಿ 1 ಅಥವಾ 2 ವಿಷಲ್ ಕೂಗಿಸಿ ಬೇಯಿಸಿ ಇಟ್ಟುಕೊಳ್ಳಿ.

   

ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ, ಸಾಸಿವೆ, ಜೀರಿಗೆ, ಚಿಟಿಕೆ ಅರಿಶಿಣ, ಈರುಳ್ಳಿ, ಹಸಿ ಮೆಣಸಿನ ಕಾಯಿ, ಕರಿಬೇವು, ಮಾವಿನ ಕಾಯಿ ತುಂಡು, 1 ಚಮಚ ಖಾರ ಪುಡಿ ಹಾಕಿ ಬಾಡಿಸಿ, ಮಾವಿನ ಕಾಯಿ ಮೆತ್ತಗಾದ ಮೇಲೆ, ಬೇಯಿಸಿದ ಬೇಳೆ, ಸ್ವಲ್ಪ ನೀರು, ಉಪ್ಪು(ಚೂರು ಬೆಲ್ಲ /ಸಕ್ಕರೆ ಬೇಕಾದಲ್ಲಿ ಹಾಕಬಹುದು) ಹಾಕಿ 5 ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ, ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ, ಚಪಾತಿ/ ಬಿಸಿ ಅನ್ನ, ತುಪ್ಪದ ಜೊತೆ ಬಡಿಸಿ. ಮಾಡುವುದು ಬಹಳ ಸುಲಭ, ರುಚಿಯಾಗಿರುತ್ತದೆ

   

ಧನ್ಯವಾದಗಳು