ಈ ದಿನದ ವಿಶೇಷ ಮಲ್ಲಿಗೆ ಇಡ್ಲಿ!

ಮಲ್ಲಿಗೆ ಇಡ್ಲಿ ಮಾಡುವ ವಿಧಾನ:-

ಇಡ್ಲಿ / ದೋಸೆ ಅಕ್ಕಿ – 3 ಲೋಟ
ಉದ್ದಿನ ಬೇಳೆ – 1 ಲೋಟ
ಅವಲಕ್ಕಿ – 1/2 ಲೋಟ
ಸಬ್ಬಕ್ಕಿ ( ಸಾಬೂದಾನ) – 1/2 ಲೋಟ

ಮೇಲಿನ ಎಲ್ಲಾ ಸಾಮಗ್ರಿಗಳನ್ನು ಬೇರೆ ಬೇರೆಯಾಗಿ ತೊಳೆದು ನೆನೆಸಿಡಿ. ಸಬ್ಬಕ್ಕಿ ಮಾತ್ರ 6 ಗಂಟೆ ಕಾಲ ನೆನೆಯಬೇಕು. ಮಿಕ್ಕದ್ದೆಲ್ಲ 2 ಗಂಟೆ ನೆನೆಸಿದರೆ ಸಾಕು.

ಮೊದಲು ಸಬ್ಬಕ್ಕಿಯನ್ನು ನುಣ್ಣಗೆ ರುಬ್ಬಿ, ನಂತರ ಉದ್ದಿನ ಬೇಳೆ, ಅಕ್ಕಿ, ಅವಲಕ್ಕಿಯನ್ನು ಕಡಿಮೆ ನೀರು ಬಳಸಿ ನುಣ್ಣಗೆ ರುಬ್ಬಿ.

   

ಉಪ್ಪು ಸೇರಿಸಿ ಕಲೆಸಿ ರಾತ್ರಿ ಪೂರ್ತಿ ಹುಳಿಯಾಗಲು ಬಿಡಿ. Stove ಪಕ್ಕ ಇಟ್ಟರೆ ಒಳ್ಳೆಯದು. ಬೆಚ್ಚಗಿನ ಜಾಗದಲ್ಲಿ ಇದ್ದರೆ ಬೇಗ ಉದುಗು ಬರುತ್ತದೆ.

ಬೆಳಿಗ್ಗೆ ಸ್ವಲ್ಪ ಸೋಡಾ ಬೇಕಾದರೆ ಹಾಕಿ ಇಡ್ಲಿ ತಟ್ಟೆಗೆ ತುಪ್ಪ ಅಥವಾ ಎಣ್ಣೆ ಸವರಿ 10 ರಿಂದ 12 ನಿಮಿಷ ಬೇಯಿಸಿದರೆ ಮೃದುವಾದ, ಮಲ್ಲಿಗೆ ಇಡ್ಲಿ ಸಿದ್ಧ!

   

ಬಟ್ಟಲಿನಲ್ಲಿ ಮಾಡುವುದಾದರೆ 15 ನಿಮಿಷ ಬೇಯಿಸಿ. ಸ್ವಲ್ಪ ಸಮಯ ಹೆಚ್ಚು ಬೇಕಾಗುತ್ತದೆ!

ಸಾಂಬಾರು, ಪುದೀನಾ ಚಟ್ನಿ, ವಡೆಯೊಂದಿಗೆ ತುಂಬಾ ಚೆನ್ನಾಗಿರುತ್ತದೆ!

ಧನ್ಯವಾದಗಳು.