ಸುಲಭವಾದ, ರುಚಿಯಾದ, ಬೇಗ ಮಾಡಬಹುದಾದ ವಿಶೇಷವಾದ ಪಲಾವ್!

ಮಾಡುವ ವಿಧಾನ:-

1 ಲೋಟ ಬಾಸುಮತಿ ಅಕ್ಕಿ 15 ನಿಮಿಷ ನೆನೆಸಿ ಸೋರಿ ಹಾಕಿಡಿ.

1 ಚಮಚ ಬಿಸಿ ಹಾಲಿಗೆ ಸ್ವಲ್ಪ ಕುಂಕುಮ ಕೇಸರಿ ಹಾಕಿಡಿ.

1 ಈರುಳ್ಳಿ ಸಣ್ಣಗೆ ಉದ್ದಕ್ಕೆ ಹೆಚ್ಚಿಡಿ.

2 ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ.

ಸ್ವಲ್ಪ ಗೋಡಂಬಿ, ಬಾದಾಮಿ, ದ್ರಾಕ್ಷಿ ತುಪ್ಪದಲ್ಲಿ ಹುರಿದಿಡಿ.

ಈರುಳ್ಳಿ ಕೆಂಪಗೆ ಹುರಿದಿಡಿ.

   

ಕುಕ್ಕರಿನಲ್ಲಿ 4 ಚಮಚ ತುಪ್ಪ ಹಾಕಿ ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎವೆ, ಮರಾಠಿ ಮೊಗ್ಗು ಹಾಕಿ ಸ್ವಲ್ಪ ಹುರಿದು, ಹಸಿ ಮೆಣಸಿನಕಾಯಿ, 1/2 ಚಮಚ ಶುಂಠಿ ಪುಡಿ/ಅಥವಾ ತುರಿದ ಶುಂಠಿ, ಬಾಸುಮತಿ ಅಕ್ಕಿ, ಕುಂಕುಮ ಕೇಸರಿ ಹಾಕಿದ ಹಾಲು ಹಾಕಿ ಹುರಿದು, ಉಪ್ಪು, 1 1/2 ಅಥವಾ 1 3/4 ಲೋಟ ನೀರು ಹಾಕಿ, ಮುಚ್ಚಳ ಮುಚ್ಚಿ ವೇಟ್ ಹಾಕದೆ ಕಡಿಮೆ ಉರಿಯಲ್ಲಿ 15 ನಿಮಿಷ ಬೇಯಿಸಿ.

ನಂತರ ಮೇಲೆ ಹುರಿದಿಟ್ಟಿರುವ ಈರುಳ್ಳಿ, Dry fruits, ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಕಲೆಸಿ.

ಕೊನೆಯಲ್ಲಿ ಸಣ್ಣದಾಗಿ ಹೆಚ್ಚಿದ ಸೇಬು, ದಾಳಿಂಬೆ, ಹಸಿರು ದ್ರಾಕ್ಷಿ, ಪೈನಾಪಲ್ ಹಾಕಿದರೆ ರುಚಿಯಾದ ಕಾಶ್ಮೀರಿ ಪಲಾವ್ ಸಿದ್ಧ!

      

ಈ ಪಲಾವ್ ನಲ್ಲಿ fruits, dry fruits ಸ್ವಲ್ಪಾ ಹೆಚ್ಚೇಬೇಕಾಗುವುದು.

ಖಾರಾ, ಮಸಾಲ ಹೆಚ್ಚು ಇಲ್ಲ. ಮೊಸರು ಬಜ್ಜಿಯೊಂದಿಗೆ ಅಥವಾ plain gravy ಯೊಂದಿಗೆ ತುಂಬಾ ಚೆನ್ನಾಗಿರುತ್ತದೆ.

ಧನ್ಯವಾದಗಳು.