ಗುಲ್ಕಂದ್ ಆರೋಗ್ಯಕರವಾದ, ತಂಪಾದ ತಿನಿಸು! ಬಾಯಲ್ಲಿ ಹುಣ್ಣು ಆದಾಗ ಅಂಗಡಿಗೆ ಹೋಗಿ ತಂದು ತಿನ್ನುತ್ತೇವೆ. ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ!

ಮಾಡುವ ವಿಧಾನ:-

ನಿಮಗೆ ಬೇಕಾಗುವಷ್ಟು ತಾಜಾ ಗುಲಾಬಿ ಹೂಗಳ ದಳಗಳನ್ನು ಬಿಡಿಸಿ, ಚೆನ್ನಾಗಿ ಎರಡು ಮೂರು ಬಾರಿ ಚೆನ್ನಾಗಿ ತೊಳೆದು, ನೀರು ಸೋರಿ ಹಾಕಿಡಿ. ಕೇವಲ ದಳಗಳನ್ನು ಮಾತ್ರ ಬಿಡಿಸಿಕೊಳ್ಳಿ. ತೊಟ್ಟು ಮತ್ತು ಮಧ್ಯದ ಭಾಗ ಬೇಡ.

ಸಣ್ಣದಾಗಿ ಹೂವಿನ ದಳಗಳನ್ನು ಹೆಚ್ಚಿ ಕೊಳ್ಳಿ.

ಹೂವಿನ ಅರ್ಧದಷ್ಟು ಅಳತೆ ಸಕ್ಕರೆ ಹಾಕಿ ದಪ್ಪ ತಳದ ಬಾಣಲೆಯಲ್ಲಿ ಮಧ್ಯಮ ಉರಿಯಲ್ಲಿ ಬೇಯಿಸಿ. ಆಗಾಗ ಕಲೆಸುತ್ತಾ ಕಡಿಮೆ ಉರಿಯಲ್ಲಿ ಸಕ್ಕರೆ ಸಂಪೂರ್ಣವಾಗಿ ಕರಗಿ, ಹೂವೆಲ್ಲಾ ಬೇಯುವ ತನಕ ಒಲೆಯ ಮೇಲಿಟ್ಟು, ಕೊನೆಯಲ್ಲಿ 1 ಟೇಬಲ್ ಚಮಚ ಜೇನುತುಪ್ಪ, ಚಿಟಿಕೆ ಏಲಕ್ಕಿ ಪುಡಿ ಹಾಕಿ ಕಲೆಸಿ, ತಣ್ಣಗಾದ ಮೇಲೆ ಸವಿಯಿರಿ.

   

ಹೀಗೆ ಮಾಡಿದ ಗುಲ್ಕಂದ್ ವಾರವಾದರೂ Fridge ನಲ್ಲಿಟ್ಟರೆ ಚೆನ್ನಾಗಿರುತ್ತದೆ.

ಈ ಗುಲ್ಕಂದ್ ಹಿಗೆಯೇ ಬೇಕಾದರೂ ತಿನ್ನಬಹುದು ಅಥವಾ ಒಂದು ಬಾಳೆ ಹಣ್ಣು ಸಿಪ್ಪೆ ತೆಗೆದು ಉದ್ದಕ್ಕೆ ಸೀಳಿ, ಅದರ ಮೇಲೆ ಗುಲ್ಕಂದ್ ಸವರಿ, ಮೇಲೆ ಸ್ವಲ್ಪ ಬೆಣ್ಣೆ ಹಾಕಿ ಬೇಕಾದರೂ ತಿನ್ನಬಹುದು!

ಇದು Instant Gulkand recipe!

   

 

ಸಾಧಾರಣ ಗುಲ್ಕಂದ್ ಮಾಡುವ ವಿಧಾನ:-

ನೀವು ಸಾಧಾರಣವಾಗಿ ಮಾಡುವ ಗುಲ್ಕಂದ್ ಮಾಡಲು ಬಯಸಿದರೆ, ಮೇಲೆ ತಿಳಿಸಿದ ಹಾಗೆ ಹೂಗಳನ್ನು ಹೆಚ್ಚಿ, ಒಂದು ಚೆನ್ನಾಗಿ ತೊಳೆದ ಗಾಜಿನ ಬಾಟಲಿನಲ್ಲಿ, ( Sterilise ಮಾಡಿದರೆ ಒಳ್ಳೆಯದು) ಅದೇ ಅಳತೆಯಲ್ಲಿ ಹೂವಿನ ದಳ ಮತ್ತು ಸಕ್ಕರೆ ಹಾಕಿ ಚೆನ್ನಾಗಿ ಕಲೆಸಿ ಮುಚ್ಚಳ ಮುಚ್ಚಿ, ಪ್ರತಿ ದಿನ ಬೆಳಿಗ್ಗೆ ಬಿಸಿಲಿನಲ್ಲಿ ಇಡುವುದು, ಸಂಜೆ ಒಳಗಿಡುವುದು. ದಿನಾ ಒಂದು ಬಾರಿ ಚೆನ್ನಾಗಿ ಕಲೆಸುವುದು. ಹೀಗೆ ಒಂದು ತಿಂಗಳು ಕಾಲ ಮಾಡಿದರೆ ಅಂಗಡಿಗಳಲ್ಲಿ ಸಿಗುವ ಗುಲ್ಕಂದ್ ಮಾಡಬಹುದು. ಹೀಗೆ ಮಾಡಿದ ಗುಲ್ಕಂದ್ 6 ತಿಂಗಳಾದರೂ ಕೆಡುವುದಿಲ್ಲ!

ಧನ್ಯವಾದಗಳು.