ಆದರೆ ನಗರವಾಸಿಗಳಿಗೆ ಗಿಣ್ಣು ಹಾಲು ಸಿಗುವುದಿಲ್ಲ! ಆದರೆ ಗಿಣ್ಣು ತಿನ್ನುವ ಆಸೆಯಂತೂ ಇರುತ್ತದೆ!
ಗಿಣ್ಣು ಹಾಲು ಇಲ್ಲದೆ ಗಿಣ್ಣು ಸುಲಭವಾಗಿ ಮಾಡುವ ರೆಸಿಪಿ ಇಲ್ಲಿದೆ!!!
ಮಾಡಲು ವಿಧಾನ:-
ಗಟ್ಟಿಯಾದ ಹಾಲು – 1 ಲೋಟ
ಗಟ್ಟಿಯಾದ ಮೊಸರು – 1 ಲೋಟ
ಹಾಲಿನ ಪುಡಿ – 1 ಲೋಟ
ತುರಿದ ಬೆಲ್ಲ – 3/4 ಅಥವಾ 1 ಲೋಟ
ಕಾರ್ನ್ ಫ್ಲೋರ್ – 1 ಚಮಚ
ಹಾಲಿಗೆ ಹಾಲಿನ ಪುಡಿ, ಕಾರ್ನ್ ಫ್ಲೋರ್ ಹಾಕಿ ಗಂಟಿಲ್ಲದ ಹಾಗೆ ಕಲೆಸಿಡಿ.
ದಪ್ಪ ತಳದ ಬಾಣಲೆಯಲ್ಲಿ ಹಾಲು ಹಾಕಿ ಕಾಯಲು ಇಡಿ. ತುರಿದ ಬೆಲ್ಲ ಸೇರಿಸಿ ಕಲೆಸುತ್ತಾ ಇರಿ.
ಬೆಲ್ಲ ಪೂರ್ತಿಯಾಗಿ ಕರಗಿದ ಮೇಲೆ ಒಲೆಯಿಂದ ತೆಗೆದು ತಕ್ಷಣ ಮೊಸರು ಸೇರಿಸಿ, ತುಪ್ಪ ಅಥವಾ ಬೆಣ್ಣೆ ಸವರಿದ ಕುಕ್ಕರ್ ಬಟ್ಟಲಿಗೆ ಈ ಮಿಶ್ರಣ ಹಾಕಿ ಮೇಲೆ ಸ್ವಲ್ಪ ಏಲಕ್ಕಿ ಪುಡಿ ಉದುರಿಸಿ.
ಕುಕ್ಕರಿನಲ್ಲಿ ನೀರು ಹಾಕಿ ಬಟ್ಟಲು ಇಟ್ಟು ತಟ್ಟೆ ಮುಚ್ಚಿ, 20 ರಿಂದ 25 ನಿಮಿಷ ಮಧ್ಯಮ ಉರಿಯಲ್ಲಿ ಇಡ್ಲಿಯಂತೆ ಬೇಯಿಸಿ.
ನಂತರ ಮುಚ್ಚಳ ತೆಗೆದು ಚಾಕುವಿನಿಂದ ಚುಚ್ಚಿ ನೋಡಿ. ಗಿಣ್ಣು ಸಂಪೂರ್ಣವಾಗಿ ಬೆಂದಿದ್ದರೆ, ತಣ್ಣಗಾದ ನಂತರ 1 ಗಂಟೆ ಕಾಲ Fridge ನಲ್ಲಿ Set ಆಗಲು ಇಟ್ಟು ನಂತರ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ ಸವಿಯಿರಿ.
ಹಾಲಿನ ಪುಡಿಯಲ್ಲಿ ಸಕ್ಕರೆ ಅಂಶವಿರುವುದರಿಂದ ಬೆಲ್ಲ ನಿಮ್ಮ ರುಚಿಗೆ ತಕ್ಕ ಹಾಗೆ ಹಾಕಿಕೊಳ್ಳಿ.
ಧನ್ಯವಾದಗಳು.
Leave A Comment