ಸಂಜೆ ಹೊತ್ತಿನಲ್ಲಿ ಕಾಫಿ ಅಥವಾ ಟೀ ಜೊತೆಗೆ ಖಾರಾ ಖಾರಾ ಏನಾದರೂ ತಿನ್ನಬೇಕು ಅನ್ನಿಸುತ್ತದೆ! ಆಗ ಗರಿ ಗರಿಯಾದ, ಖಾರಾ ಖಾರಾ ಕ್ರಿಸ್ಪಿ ಗೋಬಿ ಮಾಡಿ ಕೊಡಿ ! ಎಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ!

ಮಾಡುವ ವಿಧಾನ:-

1 ಹೂ ಕೋಸು ಬಿಡಿಸಿ ಬಿಸಿ ನೀರಲ್ಲಿ 10 ನಿಮಿಷ ಹಾಕಿ ನೀರು ಸೋರಿ ಹಾಕಿಡಿ.

1 ಬೆಳ್ಳುಳ್ಳಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ.

4 ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ.

      

ಹೂ ಕೋಸಿಗೆ 4 ಚಮಚ ಕಾರ್ನ್ ಫ್ಲೋರ್, 4 ಚಮಚ ಮೈದಾ , 1 ಚಮಚ ಖಾರಾ ಪುಡಿ, 1/4 ಚಮಚ ಪೆಪ್ಪರ್ ಪುಡಿ, ಉಪ್ಪು, 1 ಚಮಚ Ginger Garlic Paste ಹಾಕಿ ಚೆನ್ನಾಗಿ ಕಲೆಸಿ.

ಗೋಬಿಯ ಮೇಲೆ ಹಿಟ್ಟಿನ ಕೋಟಿಂಗ್ ಚೆನ್ನಾಗಿ ಆಗಬೇಕು. ಬೇಕಿದ್ದರೆ ಸ್ವಲ್ಪ ನೀರು ಚಿಮುಕಿಸಿ.

ಕಾದ ಎಣ್ಣೆಗೆ ಗೋಬಿಯನ್ನು ಬಿಡಿ ಬಿಡಿಯಾಗಿ ಹಾಕಿ ಮಧ್ಯಮ ಉರಿಯಲ್ಲಿ ಗರಿ ಗರಿಯಾಗಿ ಕರಿಯಿರಿ.

      

ನೀವು ಬೇಕಾದರೆ ಹೀಗೆ ಟೋಮೇಟೋ ಸಾಸ್ ಅಥವಾ ಚಟ್ನಿ ಜೊತೆಯಲ್ಲಿ ತಿನ್ನಬಹುದು!

ಅಥವಾ ಒಗ್ಗರಣೆಗೆ ಸ್ವಲ್ಪ ಜೀರಿಗೆ, ಹೆಚ್ಚಿದ ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ, ಕರಿಬೇವು ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಕಲೆಸಿ ಸವಿಯಬಹುದು!

ಇದೇ ರೀತಿ ಬೇಬಿ ಕಾರ್ನ್, ಮಶ್ರೂಮ್, ಪನ್ನೀರ್ ನಲ್ಲಿ ಮಾಡಬಹುದು.

ಧನ್ಯವಾದಗಳು!