ಬಹು ಜನಪ್ರಿಯ ಸಿಹಿ. ಮಾಡುವುದು ಕೂಡ ಬಹಳ ಸುಲಭ!

ಮಾಡುವ ವಿಧಾನ:-

1 ಅಳತೆ ಸಕ್ಕರೆ ಪುಡಿ ಮಾಡಿಡಿ. ಜೊತೆಗೆ 4 ಏಲಕ್ಕಿ ಸಿಪ್ಪೆ ತೆಗೆದು ಪುಡಿ ಮಾಡಲು ಹಾಕಿ. (ಸಕ್ಕರೆ ಪುಡಿ ಮಾಡಿದ ಮೇಲೆ ಅಳತೆ ಮಾಡಿ).

ಸ್ವಲ್ಪ ಬಾದಾಮಿ, ಗೋಡಂಬಿ, ದ್ರಾಕ್ಷಿ ತುಪ್ಪದಲ್ಲಿ ಹುರಿದಿಡಿ.

     

2 ಅಳತೆ ಕಡಲೇ ಹಿಟ್ಟನ್ನು ತುಪ್ಪ ಹಾಕದೆ, ದಪ್ಪ ತಳದ ಬಾಣಲೆಯಲ್ಲಿ ಹಾಕಿ ಕಡಿಮೆ ಉರಿಯಲ್ಲಿ ಕೆಂಪಗೆ ಘಮ್ ಎಂದು ವಾಸನೆ ಬರುವವರೆಗೆ ಹುರಿದಿಡಿ. ಹೆಚ್ಚು ಕಡಿಮೆ 8 ರಿಂದ 10 ನಿಮಿಷ ಹುರಿಯಬೇಕು.

ಚಿಕ್ಕ ಬಾಣಲೆಯಲ್ಲಿ 1/2 ಅಳತೆ ತುಪ್ಪ ಕರಗಲು ಇಡಿ.

ಹುರಿದ ಕಡಲೇ ಹಿಟ್ಟನ್ನು ಒಲೆಯಿಂದ ತೆಗೆದು, ಸಕ್ಕರೆ ಪುಡಿ, ಹುರಿದ Dry fruits, ತುಪ್ಪ ಹಾಕಿ ಚೆನ್ನಾಗಿ ಕಲೆಸಿ.

      

ಸ್ವಲ್ಪ ಬೆಚ್ಚಗೆ ಆದ ಮೇಲೆ ನಿಮಗೆ ಬೇಕಾದ ಅಳತೆಯ ಉಂಡೆ ಮಾಡಿಡಿ.

ಧನ್ಯವಾದಗಳು.