ಶ್ರೀ ಕೃಷ್ಣನಿಗೆ ಬಹಳ ಇಷ್ಟವಾದದ್ದು ಅವಲಕ್ಕಿ ಮತ್ತು ಹಾಲು, ಬೆಣ್ಣೆ! ಹಾಗಾಗಿ ನಾನು ಅವನಿಗೆ ಪ್ರಿಯವಾದ ಎರಡು ರೆಸಿಪಿ ಹಾಕಿದ್ದೇನೆ!

ಅವಲಕ್ಕಿ ಲಡ್ಡು ಮಾಡುವ ವಿಧಾನ:-

2 ಲೋಟ ಅವಲಕ್ಕಿ ಯಾವುದಾದರೂ ಪರ್ವಾಗಿಲ್ಲಾ, ಸ್ವಲ್ಪ ತುಪ್ಪ ಹಾಕಿ ಕೆಂಪಗೆ ಹುರಿದು, ನುಣ್ಣಗೆ ಪುಡಿ ಮಾಡಿಡಿ.

1/4 ಲೋಟ ಒಣ ಕೊಬ್ಬರಿ ತುರಿದಿಡಿ.

ಸ್ವಲ್ಪ ಗೋಡಂಬಿ, ಬಾದಾಮಿ, ದ್ರಾಕ್ಷಿ ತುಪ್ಪದಲ್ಲಿ ಹುರಿದಿಡಿ.

1 ಲೋಟ ಬೆಲ್ಲ ತುರಿದಿಡಿ.

      

ಬಾಣಲೆಯಲ್ಲಿ ಬೆಲ್ಲ ಸ್ವಲ್ಪ ನೀರು ಸೇರಿಸಿ ಕರಗಿಸಿ ಪುಡಿ ಮಾಡಿದ ಅವಲಕ್ಕಿಗೆ ಹಾಕಿ, ಕೊಬ್ಬರಿ ತುರಿ, ಚಿಟಿಕೆ ಏಲಕ್ಕಿ ಪುಡಿ, ಹುರಿದ Dry fruits ಹಾಕಿ ಚೆನ್ನಾಗಿ ಕಲೆಸಿ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿಡಿ.

   

ಮಾಡುವುದು ತುಂಬಾ ಸುಲಭ! ಬೆಲ್ಲದ ಬದಲು ಅದೇ ಅಳತೆಯ ಸಕ್ಕರೆ ಪುಡಿ ಬೇಕಾದರೂ ಹಾಕಬಹುದು. ಬೆಲ್ಲ ಕರಗಿದರೆ ಸಾಕು. ಎಳೆ ಪಾಕದ ಅವಶ್ಯಕತೆ ಇಲ್ಲ.

 

ರಸಗುಲ್ಲಾ ಮಾಡುವ ವಿಧಾನ:-

1/2 ಲೀಟರ್ ಹಾಲು ಕಾಯಲು ಇಡಿ. ಹಾಲು ಚೆನ್ನಾಗಿ ಬಿಸಿಯಾದ ಮೇಲೆ 2 ಚಮಚ ಮೊಸರು ಹಾಕಿ ಚೆನ್ನಾಗಿ ಕಲೆಸಿ, ಹಾಲು ಒಡೆಯುವಂತೆ ಮಾಡಿ.

ತೆಳುವಾದ ಬಟ್ಟೆ ಮೇಲೆ ಸೋರಿ ಹಾಕಿ, ಗಟ್ಟಿಯಾದ ಹಾಲಿನ ಭಾಗಕ್ಕೆ ನೀರು ಹಾಕಿ ಹುಳಿಯಂಶ ಹೋದ ಮೇಲೆ ನೀರು ಪೂರ ಹೋಗುವವರೆಗೆ ಯಾವುದಾದರು ಭಾರವಾದ ಸಾಮಾನು ಇಟ್ಟು, ಗಟ್ಟಿಯಾದ ಪನ್ನೀರ್ ಅನ್ನು ಚೆನ್ನಾಗಿ ನಾದಿ ಪುಟ್ಟ ಪುಟ್ಟ ಉಂಡೆ ಮಾಡಿಡಿ.

   

1 ಅಳತೆ ಸಕ್ಕರೆಗೆ 2 ಅಳತೆ ನೀರು ಹಾಕಿ ಕುದಿಯಲು ಇಡಿ. ಸ್ವಲ್ಪ ಕುಂಕುಮಕೇಸರಿ ಬೇಕಾದರೆ ಹಾಕಿ. ಸಕ್ಕರೆ ಪೂರ್ತಿಯಾಗಿ ಕರಗಿದ ಮೇಲೆ ಮಾಡಿಟ್ಟ ಪನ್ನೀರ್ ಉಂಡೆಗಳನ್ನು ಹಾಕಿ 5 ನಿಮಿಷ ಕುದಿಸಿ.

ಸಕ್ಕರೆ ಪಾಕದಲ್ಲಿ ಬೆಂದ ಉಂಡೆಗಳು ದಪ್ಪಗಾಗುತ್ತವೆ.

ಉರಿ ಕಡಿಮೆ ಮಾಡಿ ಸ್ವಲ್ಪ ಹೊತ್ತು ಬೇಯಿಸಿ ನಂತರ ತಣ್ಣಗಾದ ಮೇಲೆ Fridge ನಲ್ಲಿ ತಣ್ಣಗಾಗಲು ಇಟ್ಟು ಸವಿಯಿರಿ.

   

ಶ್ರೀ ಕೃಷ್ಣನ ದಯೆ ನಿಮ್ಮ ಹಾಗೂ ನಿಮ್ಮ ಕುಟುಂಬದ ಸದಸ್ಯರ ಮೇಲಿರಲಿ ಎಂಬುದೇ ನನ್ನ ಹಾರೈಕೆ.

ಧನ್ಯವಾದಗಳು.