ಹೆಸರೇ ಹೇಳುವಂತೆ ರುಚಿ ಅಮೃತಾನೆ!!! ಮಾಡಲು ಸ್ವಲ್ಪ ಸಮಯ ಬೇಕು ಅಷ್ಟೇ! ಆದರೆ ರುಚಿ ಮಾತ್ರ ಅದ್ಭುತ!!!

ಮಾಡುವ ವಿಧಾನ:-

1 ಅಳತೆ ಗಟ್ಟಿಯಾದ ಕಾಯಿ ಹಾಲು ತೆಗೆದಿಡಿ.

1 ಅಳತೆ ಬೆಲ್ಲ ತುರಿದಿಡಿ.

ದಪ್ಪ ತಳದ ಬಾಣಲೆಯಲ್ಲಿ 1 ಅಳತೆ ಗಟ್ಟಿಯಾದ ಹಾಲು, 1 ಅಳತೆ ಕಾಯಿ ಹಾಲು, 1 ಅಳತೆ ಬೆಲ್ಲ ಹಾಕಿ ಮಧ್ಯಮ ಉರಿಯಲ್ಲಿ ಕಲೆಸುತ್ತಾ ಇರಿ.

   

ಮಿಶ್ರಣ ಸ್ವಲ್ಪ ಗಟ್ಟಿಯಾದ ಮೇಲೆ ಉರಿ ಕಡಿಮೆ ಮಾಡಿ ಕೈ ಬಿಡದಂತೆ ಕಲೆಸುತ್ತಾ ಇರಿ.

ಮಿಶ್ರಣ ಬಾಣಲೆಯ ಅಂಚು ಬಿಡುತ್ತಾ, ಒಂದೇ ಉಂಡೆಯಂತೆ ಆದಾಗ, ಚಿಟಿಕೆ ಏಲಕ್ಕಿ ಪುಡಿ ಬೇಕಾದರೆ ಸೇರಿಸಿ, ತುಪ್ಪ ಸವರಿದ ತಟ್ಟೆಗೆ ಸುರಿದು ಸ್ವಲ್ಪ ತಣ್ಣಗಾದ ಮೇಲೆ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ ಸವಿಯಿರಿ.

ಹೆಚ್ಚು ಕಡಿಮೆ 30 ನಿಮಿಷ ಬೇಕಾಗಬಹುದು.

      

ಇದು ಸ್ವಲ್ಪ ಗಟ್ಟಿಯಾಗಿ ಇರುತ್ತದೆ. ಹಾಲುಬಾಯಿ ಹಾಗೆ ಮೆತ್ತಗಿರುವುದಿಲ್ಲ!

ಮಧ್ಯಮ ಉರಿಯಲ್ಲಿ ಮಾಡಿದರೆ ಒಳ್ಳೆಯದು.

ಧನ್ಯವಾದಗಳು.