SWEET PHOOL MAKHANA ಸ್ವೀಟ್ ಫೂಲ್ ಮಖಾನಾ

Categories: Kannada, Tindi TinisuPublished On: November 24, 20170 Comments0.9 min read
Indu Jayaram
SHARE
ಹೆಸರು ಕೇಳಿ ಆಶ್ಚರ್ಯ ಆಯ್ತಾ? ಇದೇನಪ್ಪಾ ಹೊಸ ಹೆಸರು ಅಂತ! ಹಿಂದಿಯಲ್ಲಿ ಫೂಲ್ ಮಖಾನಾ ಅಂದರೆ ತಾವರೆ ಹೂವಿನ ಬೀಜ ಎಂದು ಅರ್ಥ! ಇಂಗ್ಲಿಷ್ ನಲ್ಲಿ Fox Nuts ಅನ್ನುತ್ತಾರೆ. ಮತ್ತು ನಮ್ಮ ಸಿಹಿ ಕನ್ನಡದಲ್ಲಿ ತಾವರೆ ಹೂವಿನ ಬೀಜ ಅನ್ನುತ್ತಾರೆ.

ತಾವರೆ ಹೂವು ಬಹಳ ಶ್ರೇಷ್ಠವಾದ ಹೂವು. ಮತ್ತು ಅದರ ಬೀಜ ಸಹ ಅಷ್ಟೇ ಶ್ರೇಷ್ಠ, ಆರೋಗ್ಯಕರ! ಅದರ ಬೆಲೆ ಸ್ವಲ್ಪ ಹೆಚ್ಚು ಅಷ್ಟೇ.

ಅದರಲ್ಲಿ ಆರೋಗ್ಯಕ್ಕೆ ಬೇಕಾಗುವಷ್ಟು ಒಳ್ಳೆಯ ಅಂಶಗಳಿವೆ. ಮಧುಮೇಹ, ರಕ್ತದೊತ್ತಡ, ಹೃದಯದ ತೊಂದರೆಗಳನ್ನು ಕಡಿಮೆ ಮಾಡುತ್ತದೆ. High in fibre, less in calories! ಉತ್ತರ ಭಾರತದಲ್ಲಿ ಉಪವಾಸದ ದಿನಗಳಲ್ಲಿ ಇದನ್ನು ತುಂಬಾ ಉಪಯೋಗಿಸುತ್ತಾರೆ. ರುಚಿ ಸ್ವಲ್ಪ ನಮ್ಮ ಪಾಪ್ ಕಾರ್ನ್ ಅಥವಾ ಭತ್ತದ ಅರಳಿನ ಹಾಗೆ! ಆದರೆ ಹಾಗೇ ತಿಂದರೆ ಸ್ವಲ್ಪ ಮೆತ್ತಗಿರುತ್ತದೆ. ಹೂವಿನ ಮಧ್ಯದಲ್ಲಿರುವ Stem ತೆಗೆದು, ಹುರಿದಿಟ್ಟಿರುತ್ತಾರೆ.

ಇದರಿಂದ ರುಚಿಯಾದ ಸಿಹಿ ಮಾಡುವ ರೆಸಿಪಿ ಇಲ್ಲಿದೆ!

ಸ್ವೀಟ್ ಫೂಲ್ ಮಖಾನ ಮಾಡುವ ವಿಧಾನ:-

1 ಲೋಟ ಬೆಲ್ಲ ಪುಡಿ ಮಾಡಿಡಿ.

2 ಲೋಟ ಫೂಲ್ ಮಖಾನಾವನ್ನು ಸ್ವಲ್ಪ ತುಪ್ಪ ಹಾಕಿ ಸಣ್ಣ ಉರಿಯಲ್ಲಿ 6 ರಿಂದ 8 ನಿಮಿಷ ಹುರಿಯಬೇಕು. ಬೇಗ ತೆಗೆದರೆ ಮೆತ್ತಗೆ ಇರುತ್ತದೆ. ಗರಿ ಗರಿಯಾಗಿ ಆಗಲು ಸ್ವಲ್ಪ ಸಮಯ ಬೇಕು. ಕೈಯಿಂದ ಒಡೆದರೆ ಗೊತ್ತಾಗುತ್ತೆ! ಬೇಗ ಒಡೆದರೆ ಗರಿ ಆಗಿದೆಯೆಂದು ಅರ್ಥ!

   

ಇನ್ನೊಂದು ಬಾಣಲೆಯಲ್ಲಿ ಬೆಲ್ಲ ಸ್ವಲ್ಪ ನೀರು ಸೇರಿಸಿ ಕುದಿಯಲು ಇಡಿ. ಬೆಲ್ಲ ಕರಗಿ ಒಂದೆಳೆ ಪಾಕ ಬಂದು ಸ್ವಲ್ಪ ಗಟ್ಟಿಯಾಗಿ ಆದಾಗ ಹುರಿದ ಫೂಲ್ ಮಖಾನಾಗೆ ಹಾಕಿ, 2 ಚಮಚ Dessicated coconut powder ಹಾಕಿ, ಸ್ವಲ್ಪ ಏಲಕ್ಕಿ ಪುಡಿ ಹಾಕಿ ಕಡಿಮೆ ಉರಿಯಲ್ಲಿ ಬೆಲ್ಲದ ಪಾಕ ಸಂಪೂರ್ಣವಾಗಿ ಫೂಲ್ ಮಖಾನಾಗೆ ಅಂಟುವವರೆಗೆ ಹುರಿದರೆ, ರುಚಿಯಾದ, ಗರಿ ಗರಿಯಾದ ಸ್ವೀಟ್ ಫೂಲ್ ಮಖಾನಾ ಸಿದ್ಧ!

   

ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ವಾರವಾದರೂ ಗರಿ ಗರಿಯಾಗಿರುತ್ತದೆ!

ನನಗೆ ಈ ಫೂಲ್ ಮಖಾನಾ ಪರಿಚಯಿಸಿದ್ದು ನನ್ನ ಗೆಳತಿ, ಸಹೋದರಿಯಾದ ಉಮಾ ದೇಶ್ ಪಾಂಡೆ ಅವರು. ನನಗಂತೂ ಇದರ ಬಗ್ಗೆ ಏನೂ ಗೊತ್ತಿರಲಿಲ್ಲ!

ಎಲ್ಲಾ ಸೂಪರ್ ಮಾರ್ಕೆಟ್ ಗಳಲ್ಲೂ ಸಿಗುತ್ತದೆ. ಫೋಟೋ ಕೂಡ ಹಾಕಿದ್ದೇನೆ.

   

Desiccated coconut ಅಂಗಡಿಗಳಲ್ಲಿ ಸಿಗುತ್ತದೆ. ಇಲ್ಲದಿದ್ದರೆ ಮನೆಯಲ್ಲಿ ಇರುವ ಒಣ ಕೊಬ್ಬರಿಯ ಕಪ್ಪು ಭಾಗ ತೆಗೆದು ಚಿಕ್ಕ ಚಿಕ್ಕದಾಗಿ ಕತ್ತರಿಸಿ ಪುಡಿ ಮಾಡಿದರೆ ಅದೇ Desiccated coconut! ಖಾಯಿ ತುರಿ ಹಾಕಿದರೆ ಮೆತ್ತಗಾಗುತ್ತೆ! ಒಣ ಕೊಬ್ಬರಿ ಪುಡಿಯೇ ಹಾಕಬೇಕು. ಇದೇ ರೀತಿ ಗೋಡಂಬಿ, ಬಾದಾಮಿಯಲ್ಲಿ ಬೇಕಾದರೂ ಮಾಡಬಹುದು!

   

ಈ ರೆಸಿಪಿ ಮತ್ತು ಇದರ ವಿವರ ನಾನು ವೆಬ್ ನಿಂದ ತಿಳಿದುಕೊಂಡದ್ದು. ಇದರಿಂದ ಪಾಯಸ, ಗ್ರೇವಿ ಮಾಡಬಹುದು. ಮುಂದೆ ಯಾವಾಗಲಾದರೂ ಆ ರೆಸಿಪಿ ಹಾಕುತ್ತೇನೆ.

ಧನ್ಯವಾದಗಳು.

About the Author: Indu Jayaram

Indu Jayaram is a homemaker and regularly writes on home cooked food. She has more than 10,000 followers in her facebook page https://www.facebook.com/pg/indumathijayaram/

Leave A Comment