ಸುಲಭವಾಗಿ ಮಾಡಬಹುದಾದ, ಸ್ವಲ್ಪ ದಿನಗಳವರೆಗೆ ಮಾಡಿಟ್ಟು ತಿನ್ನಬಹುದಾದ ಹೋಳಿಗೆ!

ಮಾಡುವ ವಿಧಾನ:-

1 ಬಟ್ಟಲು ಮೈದಾ, ಚಿಟಿಕೆ ಉಪ್ಪು ಹಾಕಿ ಚೆನ್ನಾಗಿ ಕಲೆಸಿ, ಸ್ವಲ್ಪ ನೀರು ಚಿಮುಕಿಸುತ್ತಾ ಪೂರಿ ಹಿಟ್ಟಿನ ಹದಕ್ಕೆ ಕಲೆಸಿ 1/2 ಮುಚ್ಚಿಡಿ.

1 ಲೋಟ ಸಕ್ಕರೆಗೆ 2 ಏಲಕ್ಕಿ, 1 ಲವಂಗ ಹಾಕಿ ಪುಡಿ ಮಾಡಿಡಿ.

6 ಚಮಚ ಒಣ ಕೊಬ್ಬರಿ ಪುಡಿ ಮಾಡಿಡಿ.

    

ಬೇಕಾದರೆ ಸ್ವಲ್ಪ ಗೋಡಂಬಿ, ಬಾದಾಮಿ, ವಾಲ್ ನಟ್ ಪುಡಿ ಮಾಡಿ ಸೇರಿಸಿ.

2 ಚಮಚ ಗಸಗಸೆ ಹುರಿದು ಸೇರಿಸಿ.

ಮೇಲೆ ಹೇಳಿರುವ ಎಲ್ಲರನ್ನೂ ಚೆನ್ನಾಗಿ ಕಲೆಸಿಡಿ.

ಕಲೆಸಿಟ್ಟ ಹಿಟ್ಟಿನಿಂದ ಚಿಕ್ಕ ಚಿಕ್ಕ ಉಂಡೆ ಮಾಡಿ ಆದಷ್ಟೂ ತೆಳ್ಳಗೆ ಲಟ್ಟಿಸಿ. ಫೋರ್ಕ್ ನಿಂದ ಅಲ್ಲಲ್ಲಿ ಚುಚ್ಚಿ ಕಾದ ಕಾವಲಿಯ ಮೇಲೆ ಹಾಕಿ ಒಂದು ಕಡೆ ಬೇಯಿಸಿ.

   

ನಂತರ ತಿರುವಿ ಹಾಕಿ ಮೇಲೆ ಸಕ್ಕರೆ ಪುಡಿ ಉದುರಿಸಿ ಕೊನೆಗಳನ್ನು ಸ್ವಲ್ಪ ಮಡಚಿ. ನಂತರ ಮತ್ತೊಮ್ಮೆ ಮಡಚಿ ಎರಡೂ ಕಡೆ ಬೇಯಿಸಿ. ತುದಿಗಳನ್ನು ಒದ್ದೆ ಬಟ್ಟೆಯಿಂದ ಒತ್ತಿ. ಹೀಗೆ ಮಾಡುವುದರಿಂದ ಹೋಳಿಗೆ ಅಂಚು ಬಿಟ್ಟುಕೊಳ್ಳುವುದಿಲ್ಲ.

 

ನಂತರ ಹಾಲು ಮತ್ತು ತುಪ್ಪ ಮೇಲೆ ಹಾಕಿ ಸವಿಯಿರಿ.

ಎಣ್ಣೆ ಹಾಕದಿರುವುದರಿಂದ ನಾಲ್ಕೈದು ದಿನವಾದರೂ ಚೆನ್ನಾಗಿರುತ್ತದೆ.

ಧನ್ಯವಾದಗಳು.