ಮೆತ್ತಗೆ, ರುಚಿಯಾದ ಸೆಟ್ ದೋಸೆ ಎಲ್ಲರಿಗೂ ಇಷ್ಟವಾಗುವ ತಿಂಡಿ!

ಮಾಡುವ ವಿಧಾನ:-

ದೋಸೆ ಅಕ್ಕಿ – 4 ಲೋಟ
ಉದ್ದಿನ ಬೇಳೆ – 1 ಲೋಟ
ಗಟ್ಟಿ ಅವಲಕ್ಕಿ – 1/2 ಲೋಟ
ಮೆಂತ್ಯ – 2 ಚಮಚ

ಎಲ್ಲಾ ತೊಳೆದು ಬೇರೆ ಬೇರೆ 2 ಗಂಟೆ ನೆನೆಸಿಡಿ.

ಉದ್ದಿನ ಬೇಳೆ ಮತ್ತು ಮೆಂತ್ಯ ನುಣ್ಣಗೆ ರುಬ್ಬಿ. ಅಕ್ಕಿ ಅವಲಕ್ಕಿ ಒಟ್ಟಿಗೆ ನುಣ್ಣಗೆ ರುಬ್ಬಿ ಉಪ್ಪು ಸೇರಿಸಿ ರಾತ್ರಿ ಪೂರ ಉದುಗು ಬರಲು ಬಿಡಿ.

ಬೆಳಗ್ಗೆ ಸ್ವಲ್ಪ ಸಕ್ಕರೆ ಸೇರಿಸಿ ಕಾವಲಿಯ ಮೇಲೆ ಸ್ವಲ್ಪ ದಪ್ಪ ಮತ್ತು ಚಿಕ್ಕದಾಗಿ ದೋಸೆ ಮಾಡಿ, ಸ್ವಲ್ಪ ಎಣ್ಣೆ ಹಾಕಿ ತಟ್ಟೆ ಮುಚ್ಚಿಡಿ. ನಂತರ ತಿರುವಿ ಹಾಕಿ ಎರಡೂ ಕಡೆ ಬೇಯಿಸಿ, ಚಟ್ನಿ ಅಥವಾ ಸಾಗು ಜೊತೆಗೆ ಬಡಿಸಿ.

   

ಈ ದೋಸೆಗೆ ಹೆಚ್ಚು ಎಣ್ಣೆ ಬೇಕಿಲ್ಲ. ವಯಸ್ಸಾದವರು, ಮಕ್ಕಳಿಗೆ ಕೊಡಲು ತುಂಬಾ ಚೆನ್ನಾಗಿರುತ್ತದೆ!

ನಾನು Prestige Company Mini Uthappam Tava ( Non Stick) ದಲ್ಲಿ ದೋಸೆ ಮಾಡಿರುವುದು!

 

ಈರುಳ್ಳಿ ಚಟ್ನಿ ಮಾಡುವ ವಿಧಾನ:-

4 ಈರುಳ್ಳಿ ಸಣ್ಣಗೆ, ಉದ್ದಕ್ಕೆ ಹೆಚ್ಚಿಡಿ.

6 ರಿಂದ 8 ಬ್ಯಾಡಗಿ ಮೆಣಸಿನ ಕಾಯಿಯನ್ನು ಎಣ್ಣೆ ಹಾಕಿ ಹುರಿದಿಡಿ.

1 ಚಮಚ ಹುಣಿಸೆ ರಸ ತೆಗೆದಿಡಿ.

   

ಈರುಳ್ಳಿ ಸ್ವಲ್ಪ ಎಣ್ಣೆ ಹಾಕಿ ಹುರಿದು, ತಣ್ಣಗಾದ ಮೇಲೆ ಮೆಣಸಿನಕಾಯಿ, ಹುಣಿಸೆ ರಸ, ಉಪ್ಪು, ಕೊತ್ತಂಬರಿ ಸೊಪ್ಪು ಹಾಕಿ ತರಿ ತರಿಯಾಗಿ ರುಬ್ಬಿ, ಒಗ್ಗರಣೆ ಹಾಕಿದರೆ ರುಚಿಯಾದ ಈರುಳ್ಳಿ ಚಟ್ನಿ ಸಿದ್ಧ!

ಧನ್ಯವಾದಗಳು.