ಸುಲಭವಾಗಿ ಮಾಡಬಹುದಾದ ಸಿಹಿ!

ಮಾಡುವ ವಿಧಾನ:-

1 ಲೋಟ ಸಾಬೂದಾನ (ಸಬ್ಬಕ್ಕಿ ) ಯನ್ನು ರಾತ್ರಿ ಪೂರ ನೆನೆಸಿಡಿ.

   

ಬೆಳಿಗ್ಗೆ ನೀರಿನಿಂದ ತೆಗೆದು 3 ಲೋಟ ಗಟ್ಟಿಯಾದ ಹಾಲು ಹಾಕಿ ದಪ್ಪ ತಳದ ಪಾತ್ರೆಯಲ್ಲಿ ಬೇಯಲು ಇಡಿ. ಸಾಬೂದಾನ ಬೆಂದ ಮೇಲೆ ಉರಿ ಕಡಿಮೆ ಮಾಡಿ, 1/2 ಅಥವಾ 3/4 ಲೋಟ ಸಕ್ಕರೆ (ನಿಮ್ಮ ರುಚಿಗೆ ತಕ್ಕಷ್ಟು ಸಿಹಿ) ಹಾಕಿ, ಸಾಬೂದಾನ ಪೂರಾ ಬೆಂದು ಗಟ್ಟಿಯಾಗಿ ಆಗುವವರೆಗೆ ಬೇಯಿಸಿ. ಸ್ವಲ್ಪ ತುಪ್ಪ ಹಾಕಿ ಚೆನ್ನಾಗಿ ಕಲೆಸಿ. ಬೇಕಾದರೆ ಹುರಿದ ಗೋಡಂಬಿ ದ್ರಾಕ್ಷಿ, ಏಲಕ್ಕಿ ಪುಡಿ ಹಾಕಬಹುದು.

ತುಪ್ಪ ಸವರಿದ ತಟ್ಟೆಗೆ ಸುರಿದು ತಣ್ಣಗಾದ ಮೇಲೆ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ ಸವಿಯಿರಿ!

ಧನ್ಯವಾದಗಳು.