ಸ್ವಲ್ಪ ಗೋಡಂಬಿ, ಬಾದಾಮಿ ಸಣ್ಣಗೆ ಹೆಚ್ಚಿಡಿ.
1/2 ಅಳತೆ ಒಣ ಕೊಬ್ಬರಿ/ ಕಾಯಿ ತುರಿದಿಡಿ.
1 ಅಳತೆ ಸಕ್ಕರೆಗೆ 1 /2 ಅಳತೆ ನೀರು, ಸ್ವಲ್ಪ ಕೇಸರಿ ದಳ ಹಾಕಿ ಕುದಿಯಲು ಇಡಿ.
ಇನ್ನೊಂದು ಕಡೆ 4 ಚಮಚ ತುಪ್ಪ ಹಾಕಿ 1 ಅಳತೆ ಚಿರೋಟಿ ರವೆ ಹಾಕಿ ಘಮ್ ಎಂದು ವಾಸನೆ ಬರುವವರೆಗೆ ಹುರಿದಿಡಿ.
ಸಕ್ಕರೆ ಪಾಕ ಕುದಿದು 1/2 ಎಳೆ ಪಾಕ ಬಂದಾಗ, ಹುರಿದ ರವೆಗೆ ಹಾಕಿ, ಕೊಬ್ಬರಿ ತುರಿ, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕಲೆಸಿ.
ಮಿಶ್ರಣ ಬಾಣಲೆಯ ಅಂಚು ಬಿಡುತ್ತಾ ಬಂದಾಗ, 2 ಚಮಚ ತುಪ್ಪ ಹಾಕಿ ಕಲೆಸಿ, ತುಪ್ಪ ಸವರಿದ ತಟ್ಟೆಗೆ ಸುರಿದು, ಹೆಚ್ಚಿದ ಗೋಡಂಬಿ, ಬಾದಾಮಿ ಹಾಕಿ ಸ್ವಲ್ಪ ತಟ್ಟಿ, ತಣ್ಣಗಾಗಲು ಬಿಡಿ.
ನಂತರ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ ಸವಿಯಿರಿ.
ಧನ್ಯವಾದಗಳು.
Leave A Comment