ಜನಪ್ರಿಯ ಬೆಂಗಾಲಿ ಸಿಹಿ ರೆಸಿಪಿ!

ಮಾಡುವ ವಿಧಾನ:-

1/2 ಲೀಟರ್ ಗಟ್ಟಿಯಾದ ಹಾಲು ಕಾಯಲು ಇಡಿ. ಹಾಲು ಬಿಸಿ ಆದ ಮೇಲೆ ಸ್ವಲ್ಪ ಗಟ್ಟಿಯಾದ ಮೊಸರು ಹಾಕಿ ಹಾಲು ಒಡೆಯುವಂತೆ ಮಾಡಿ.

ಒಡೆದ ಹಾಲನ್ನು ತೆಳುವಾದ ಬಟ್ಟೆ ಮೇಲೆ ಹಾಕಿ ನೀರಿನಂಶ ತೆಗೆಯಿರಿ. ಹುಳಿ ಅಂಶ ಹೋಗಲು ಸ್ವಲ್ಪ ನೀರು ಹಾಕಿ ಒಂದು ಭಾರವಾದ ವಸ್ತುವನ್ನು ಇಟ್ಟು ಪನ್ನೀರ್ ಸಿದ್ಧ ಮಾಡಿ ಕೊಳ್ಳಿ.

     

ಪನ್ನೀರ್ ಅನ್ನು ಚೆನ್ನಾಗಿ ನಾದಿ ಪುಟ್ಟ ಉಂಡೆ ಮಾಡಿ ಸ್ವಲ್ಪ ಒತ್ತಿ ಕಟ್ಲೆಟ್ ಆಕಾರದಲ್ಲಿ ಮಾಡಿಡಿ.

ಒಂದು ಅಳತೆ ಸಕ್ಕರೆಗೆ 2 ಅಳತೆ ನೀರು ಹಾಕಿ ಕುದಿಯಲು ಇಡಿ. ಸಕ್ಕರೆ ಪೂರ್ತಿಯಾಗಿ ಕರಗಿದ ಮೇಲೆ ಮಾಡಿಟ್ಟ ಪನ್ನೀರ್ ಉಂಡೆಗಳನ್ನು ಹಾಕಿ 5 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ ಸಕ್ಕರೆ ಪಾಕದಿಂದ ತೆಗೆದಿಡಿ.

ದಪ್ಪ ತಳದ ಪಾತ್ರೆಯಲ್ಲಿ 1/2 ಲೀಟರ್ ಗಟ್ಟಿಯಾದ ಹಾಲು ಹಾಕಿ ಕಾಯಲು ಇಡಿ. ಹಾಲು ಉಕ್ಕಲು ಬಿಡದಂತೆ ತಿರುಗಿಸುತ್ತಾ ಇರಿ. ಹಾಲು ಕಾದು ಕಾದು ಕಮ್ಮಿಯದಾಗ 100 ಗ್ರಾಂ ನಷ್ಟು ಸಕ್ಕರೆ ಹಾಕಿ ಕಲೆಸುತ್ತಾ ಇರಿ.

      

ಸ್ವಲ್ಪ ಸಣ್ಣದಾಗಿ ಹೆಚ್ಚಿದ ಗೋಡಂಬಿ, ಬಾದಾಮಿ, ಕೇಸರಿ ದಳ, ಚಿಟಿಕೆ ಏಲಕ್ಕಿ ಪುಡಿ ಹಾಕಿ ಹಾಲು ಕಾಲು ಭಾಗದಷ್ಟು ಆಗಿ ಗಟ್ಟಿಯಾದ ನಂತರ ಒಲೆಯಿಂದ ಇಳಿಸಿ.

   

ಪನ್ನೀರ್ ತುಂಡುಗಳನ್ನು ಹಾಕಿ ತಣ್ಣಗಾದ ನಂತರ, Fridge ನಲ್ಲಿಟ್ಟು 1 ಗಂಟೆಯ ನಂತಲ ಸವಿಯಿರಿ.

Fridge ನಲ್ಲಿಟ್ಟು 2 ದಿನ ಉಪಯೋಗಿಸಬಹುದು.

ಧನ್ಯವಾದಗಳು.