ಮಾಡುವ ವಿಧಾನ:-
1 ಲೋಟ ರಾಜ್ಮಾ ಕಾಳನ್ನು ಬೇಯಿಸಿಡಿ. ಬೆಂದ ನೀರು ಚೆಲ್ಲದೆ ಗ್ರೇವಿಗೆ ಹಾಕಲು ತೆಗೆದಿಡಿ.
( ನಾನು ಹಾಕಿರುವುದು ತಿಂಗಳ ಹುರುಳಿ / ಬಲಿತ ಹುರುಳಿ ಕಾಯಿಯ ಬೀಜ. ಹಾಗೆ ಕುಕ್ಕರಿನಲ್ಲಿ 1 ವಿಷಲ್ ಕೂಗಿಸಿದ್ದೇನೆ. ಒಣಗಿದ ರಾಜ್ಮಾ ಹಾಕುವುದಾದರೆ ರಾತ್ರಿ ಪೂರ ನೆನೆಸಿ ಕುಕ್ಕರಿನಲ್ಲಿ 3 ಅಥವಾ 4 ವಿಷಲ್ ಕೂಗಿಸಬೇಕು)
1 ಈರುಳ್ಳಿ , 2 ಟೊಮೆಟೊ ಸಣ್ಣಗೆ ಹೆಚ್ಚಿಡಿ.
1 ಚಿಕ್ಕ ಬೆಳ್ಳುಳ್ಳಿ ಸಿಪ್ಪೆ ಬಿಡಿಸಿ, 1 ಇಂಚು ಶುಂಠಿ, 4 ಚಮಚ ಕಾಯಿ ತುರಿ ಹಾಕಿ ನುಣ್ಣಗೆ ರುಬ್ಬಿಡಿ.
ಬಾಣಲೆಯಲ್ಲಿ 4 ಚಮಚ ಎಣ್ಣೆ/ ಬೆಣ್ಣೆ ಹಾಕಿ, ಜೀರಿಗೆ, ಈರುಳ್ಳಿ, ಟೊಮೆಟೊ ಹಾಕಿ ಹುರಿದು, ಚಿಟಿಕೆ ಅರಿಶಿಣ, 1 ಚಮಚ ಖಾರಾ ಪುಡಿ, 1/2 ಚಮಚ ಗರಂ ಮಸಾಲ, 1/2 ಚಮಚ ಧನಿಯ ಪುಡಿ, ಉಪ್ಪು, ರುಬ್ಬಿದ ಮಿಶ್ರಣ ಹಾಕಿ ಬಾಡಿಸಿ ಬೆಂದ ರಾಜ್ಮಾ , ರಾಜ್ಮಾ ಬೆಂದ ನೀರು ಹಾಕಿ ಸ್ವಲ್ಪ ಕೂಡ ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು, ಸ್ವಲ್ಪ ಫ್ರೆಶ್ ಕ್ರೀಮ್ ಹಾಕಿದರೆ ರುಚಿಯಾದ ರಾಜ್ಮಾ ಮಸಾಲ ಸವಿಯಲು ಸಿದ್ಧ!
ಅನ್ನದ ಜೊತೆಗೆ ಮಾಡುವುದಾದರೆ ಸ್ವಲ್ಪ ನೀರು ಹೆಚ್ಚಾಗಿ ಹಾಕಿ.
ಧನ್ಯವಾದಗಳು.
Leave A Comment