PARAMANNA ಪರಮಾನ್ನ
ಹಾಗಾದರೆ ದುರ್ಗಾ ಮಾತೆಗೆ ಪ್ರಿಯವಾದ ಈ ಪರಮಾನ್ನವನ್ನು ನೀವೂ ಕೂಡ ಮಾಡಿ ನೈವೇದ್ಯ ಮಾಡಿ, ತಾಯಿಯ ಕೃಪೆಗೆ ಪಾತ್ರರಾಗಿ.
ಪರಮಾನ್ನ ಮಾಡುವ ವಿಧಾನ:-
1 ಲೋಟ ಅಕ್ಕಿ ತೊಳೆದಿಡಿ.
1 ಲೋಟ ಬೆಲ್ಲ ತುರಿದಿಡಿ.
ಸ್ವಲ್ಪ ಗೋಡಂಬಿ, ದ್ರಾಕ್ಷಿ ತುಪ್ಪದಲ್ಲಿ ಹುರಿದಿಡಿ.
1 ಏಲಕ್ಕಿ ಬಾಳೆ ಹಣ್ಣು ಸಣ್ಣಗೆ ಹೆಚ್ಚಿಡಿ.
ದಪ್ಪ ತಳದ ಪಾತ್ರೆಯಲ್ಲಿ 3 ಲೋಟ ನೀರುಹಾಕಿ, ಅಕ್ಕಿ ಹಾಕಿ ಬೇಯಲು ಇಡಿ. ಅಕ್ಕಿ ಅರ್ಧ ಬೆಂದಾಗ ಬೆಲ್ಲದ ಪುಡಿ ಹಾಕಿ, ಅಕ್ಕಿ ಸಂಪೂರ್ಣವಾಗಿ ಬೆಂದು ಬೆಲ್ಲವನ್ನು, ನೀರನ್ನು ಹೀರಿಕೊಂಡಾಗ ಒಲೆಯಿಂದ ತೆಗೆದು 1 ಚಮಚ ಜೇನುತುಪ್ಪ, ಬಾಳೆ ಹಣ್ಣು, ಚಿಟಿಕೆ ಏಲಕ್ಕಿ ಪುಡಿ ಹಾಕಿ ಕಲೆಸಿದರೆ ದೇವಿಗೆ ಪ್ರಿಯವಾದ ಪರಮಾನ್ನ ಸಿದ್ಧ!
ಇದು ಗುಡಾನ್ನ, ಸಿಹಿ ಪೊಂಗಲ್ ಗಿಂತ ಸ್ವಲ್ಪ ವಿಭಿನ್ನವಾಗಿರುತ್ತದೆ.
ನೀರಿನ ಬದಲು ಹಾಲಿನಲ್ಲಿ ಬೇಕಾದರೂ ಬೇಯಿಸಬಹುದು.
ಎಲ್ಲರಿಗೂ ನವರಾತ್ರಿ ಹಬ್ಬದ ಶುಭಾಷಯಗಳು.
ಧನ್ಯವಾದಗಳು.