1 ಲೋಟ ಕಡಲೇ ಹಿಟ್ಟು ಜರಡಿ ಹಿಡಿದಿಡಿ. ಸ್ವಲ್ಪ ಘಮ್ ಎಂದು ವಾಸನೆ ಬರುವವರೆಗೆ ಹುರಿದಿಡಿ.( Optional)
1 1/2 ಲೋಟ ತುಪ್ಪ ಕರಗಿಸಿಡಿ. ( ಕರಗಿದ ಮೇಲೆ ಅಳತೆ ಮಾಡಿ) 2 ಲೋಟ ತುಪ್ಪ ಬೇಕಾದರೂ ಹಾಕಬಹುದು. ತುಪ್ಪ ಹಾಕಿದಷ್ಟೂ ಮೃದುವಾಗಿ ಬರುತ್ತದೆ.
ಒಂದು ತಟ್ಟೆಗೆ ಸ್ವಲ್ಪ ತುಪ್ಪ ಸವರಿಡಿ.
1 3/4 ಲೋಟ ಸಕ್ಕರೆ ದಪ್ಪ ತಳದ ಬಾಣಲೆಯಲ್ಲಿ ಹಾಕಿಡಿ.
ಸಕ್ಕರೆಗೆ 3/4 ಲೋಟ ನೀರು ಹಾಕಿ ಬಿಸಿಯಾಗಲು ಇಡಿ.
ಪಕ್ಕದ Burner ನಲ್ಲಿ ತುಪ್ಪ ಬಿಸಿಯಾಗಲು ಕಡಿಮೆ ಉರಿಯಲ್ಲಿ ಇಡಿ.
ಸಕ್ಕರೆ ಪಾಕ ಕುದಿದು ಒಂದೆಳೆ ಪಾಕ ಬಂದಾಗ ಕಡಲೇ ಹಿಟ್ಟು ಸ್ವಲ್ಪ ಹಾಕಿ ಚೆನ್ನಾಗಿ ಕಲೆಸಿ. ಮತ್ತೆ ಸ್ವಲ್ಪ ಹಾಕಿ ಚೆನ್ನಾಗಿ ಕಲೆಸಿ. ಹೀಗೆ ಸ್ವಲ್ಪ ಸ್ವಲ್ಪವೇ ಹಾಕುತ್ತಾ ಕಡಲೇ ಹಿಟ್ಟು ಗಂಟಾಗದಂತೆ ಕಲೆಸುತ್ತಾ ಇರಿ. ಜೊತೆಗೆ ಬಿಸಿ ತುಪ್ಪ ಸ್ವಲ್ಪ ಸ್ವಲ್ಪ ಸೇರಿಸುತ್ತಾ ಇರಿ. ( ಚಿಟಿಕೆ ಸೋಡಾ ಬೇಕಾದರೆ ಹಾಕಿ, ನಾನು ಹಾಕಿಲ್ಲ)
ಬಿಸಿ ತುಪ್ಪ ಹಾಕಿದೊಡನೆ ಮಿಶ್ರಣ ನೊರೆ ನೊರೆಯಾಗಿ ಆಗುತ್ತದೆ. ಕೈ ಬಿಡದೆ ಕಲೆಸುತ್ತಾ ಇರಿ. ಉರಿ ಕಡಿಮೆ ಇರಲಿ.
ತುಪ್ಪ ಪೂರ್ತಿಯಾಗಿ ಹಾಕಿದ ಮೇಲೆ ಮಿಶ್ರಣದಿಂದ ತುಪ್ಪ ಹೊರಬರಲು ಆರಂಭವಾಗಿ, ಒಂದೇ ಉಂಡೆಯಂತೆ ಆದಾಗ, ಚಿಕ್ಕ ಚಿಕ್ಕ ತೂತುಗಳು (ದೋಸೆಯಲ್ಲಿ ಬರುವಂತೆ) ಬಂದ ತಕ್ಷಣ ಮಿಶ್ರಣವನ್ನು ತುಪ್ಪ ಸವರಿದ ತಟ್ಟೆಗೆ ಸುರಿದು ಸ್ವಲ್ಪ ತಟ್ಟಿ, ತಣ್ಣಗಾದ ಮೇಲೆ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ ಸವಿಯಿರಿ.
ಧನ್ಯವಾದಗಳು.
Leave A Comment