ರುಚಿಯಾದ, ಸುಲಭವಾಗಿ ಮಾಡಬಹುದಾದ ರೆಸಿಪಿ!

ಮಾಡುವ ವಿಧಾನ:-

1 ಲೋಟ ಬಾಸುಮತಿ ಅಕ್ಕಿ ತೊಳೆದು ಕುಕ್ಕರಿನಲ್ಲಿ ಹಾಕಿ ಮುಚ್ಚಿಳ ಹಾಕದೆ ಬೇಯಿಸಿಟ್ಟುಕೊಳ್ಳಿ.

1 ಈರುಳ್ಳಿ , 1 ಬೆಳ್ಳುಳ್ಳಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ.

ತಲಾ ಒಂದೊಂದು ಕೆಂಪು, ಹಸಿರು, ಹಳದಿ ಬಣ್ಣದ ದಪ್ಪ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ. ಬೇರೆ ಬೇರೆ ಬಣ್ಣ ಸಿಗದಿದ್ದರೆ ಹಸಿರು ಬಣ್ಣದ ದಪ್ಪ ಮೆಣಸಿನಕಾಯಿ ಹಾಕಬಹುದು.

      

1 ಹಿಡಿ ಸ್ವೀಟ್ ಕಾರ್ನ್, 2 ಹಿಡಿ ನೆನೆಸಿದ ಅಥವಾ ಹಸಿ ರಾಜ್ಮಾ ಕಾಳನ್ನು ಬೇಯಿಸಿಡಿ. ( ಹಸಿ ರಾಜ್ಮಾ ಎಂದರೆ ಬಲಿತ ಹುರುಳಿ ಕಾಯಿಯ ಬೀಜ, ತಿಂಗಳುರುಳಿ ಅಂಥ ಕೂಡ ಅನ್ನುತ್ತಾರೆ)

1 ಹಸಿ ಟೊಮೆಟೊ ನುಣ್ಣಗೆ ರುಬ್ಬಿ ರಸ ಶೋಧಿಸಿಡಿ.

4 ಬ್ಯಾಡಗಿ ಮೆಣಸಿನಕಾಯಿ ಹುರಿಯದೆ ತರಿ ತರಿಯಾಗಿ ಪುಡಿ ಮಾಡಿಡಿ.

      

ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ, ಹೆಚ್ಚಿದ ಬೆಳ್ಳುಳ್ಳಿ, ಈರುಳ್ಳಿ, ಹಾಕಿ ಹುರಿದು, ಹೆಚ್ಚಿದ ದಪ್ಪ ಮೆಣಸಿನಕಾಯಿ ಹಾಕಿ ಹುರಿಯಿರಿ. ಸ್ವಲ್ಪ ಅರಿಷಿಣ, ತರಿ ತರಿಯಾಗಿ ಮಾಡಿದ ಮೆಣಸಿನ ಕಾಯಿ ಪುಡಿ, ಬೆಂದ ಕಾಳುಗಳು, ಟೊಮೇಟೋ ರಸ, ಉಪ್ಪು, 1 ಚಮಚ ಖಾರಾ ಪುಡಿ ಹಾಕಿ ಹುರಿದು, ಕೊನೆಯಲ್ಲಿ ಬಾಸುಮತಿ ಅನ್ನ, ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಕಲೆಸಿದರೆ ರುಚಿಯಾದ ಮೆಕ್ಸಿಕನ್ ರೈಸ್ ಸವಿಯಲು ಸಿದ್ಧ!

ಈ ರೆಸಿಪಿಯಲ್ಲಿ ರಾಜ್ಮಾ ಮತ್ತು ಬಣ್ಣಬಣ್ಣದ ದಪ್ಪ ಮೆಣಸಿನಕಾಯಿ ತುಂಬಾ ಮುಖ್ಯವಾದದ್ದು.

ಧನ್ಯವಾದಗಳು.