ಮಖಾನಾ ಖೀರ್ ಮಾಡುವ ವಿಧಾನ:-

ಬಾಣಲೆಯಲ್ಲಿ ಸ್ವಲ್ಪ ತುಪ್ಪ ಹಾಕಿ ಮಖಾನಾ ಹಾಕಿ ನಾಲ್ಕೈದು ನಿಮಿಷ ಮಧ್ಯಮ ಉರಿಯಲ್ಲಿ ಹುರಿದಿಡಿ. ತಣ್ಣಗಾದ ಮೇಲೆ ಕೈಯಿಂದ ಸ್ವಲ್ಪ ಮಖಾನಾ ಪುಡಿ ಮಾಡಿ ಮಿಕ್ಕದ್ದೆಲ್ಲ ಹಾಗೇ ಇಡಿ.

ದಪ್ಪ ತಳದ ಬಾಣಲೆಯಲ್ಲಿ 1/2 ಲೀಟರ್ ಗಟ್ಟಿಯಾದ ಹಾಲು ಕಾಯಲು ಇಡಿ. ಹಾಲು ಉಕ್ಕಲು ಬಿಡದಂತೆ ತಿರುಗಿಸುತ್ತಾ ಇರಿ.

      

ಹಾಲು ಅರ್ಧದಷ್ಟು ಆದಾಗ 3 ಅಥವಾ 4 ಚಮಚ ಸಕ್ಕರೆ ಹಾಕಿ ಚೆನ್ನಾಗಿ ಕಲೆಸಿ, ಹುರಿದ ಮಖಾನಾ, ಚಿಟಿಕೆ ಏಲಕ್ಕಿ ಪುಡಿ, ತುಪ್ಪದಲ್ಲಿ ಹುರಿದ ಗೋಡಂಬಿ ದ್ರಾಕ್ಷಿ ಹಾಕಿ ಕಡಿಮೆ ಉರಿಯಲ್ಲಿ ಮಖಾನಾ ಮೆತ್ತಗೆ ಆಗುವವರೆಗೂ ಬೇಯಿಸಿದರೆ ರುಚಿಯಾದ, ಸುಲಭವಾಗಿ ಮಾಡಬಹುದಾದ ಮಖಾನಾ ಖೀರ್ ಸಿದ್ಧ!

ಹೆಚ್ಚಿನ ರುಚಿಗೆ ಸಕ್ಕರೆ ಬದಲು CONDENSED MILK ಸೇರಿಸಬಹುದು.

ತಣ್ಣಗಾದ ಮೇಲೆ ಅಥವಾ ಬಿಸಿಯಾಗಿ ಹೇಗೆ ತಿಂದರೂ ಚೆನ್ನಾಗಿರುತ್ತದೆ. ಮಖಾನಾ ಎಂದರೆ ತಾವರೆ ಹೂವಿನ ಬೀಜವನ್ನು ಒಣಗಿಸಿ, ಪಾಪ್ ಕಾರ್ನ್ ಹಾಗೆ ಹುರಿದು ಮಾರುತ್ತಾರೆ. ಎಲ್ಲಾ Super market ಗಳಲ್ಲಿ ಸಿಗುತ್ತದೆ. On line ನಲ್ಲಿ ತೆಗೆದುಕೊಂಡರೆ ರೇಟ್ ಕೂಡ ಕಡಿಮೆ ಆಗುತ್ತದೆ.

 

ಟೆಂಪಲ್ ಚಿತ್ರಾನ್ನ

ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಕೊಡುವ ಚಿತ್ರಾನ್ನಕ್ಕೆ ಈರುಳ್ಳಿ, ಬೆಳ್ಳುಳ್ಳಿ ಹಾಕುವುದಿಲ್ಲ. ಹಾಗೇ ಒಗ್ಗರಣೆಗೆ ಸ್ವಲ್ಪ ಇಂಗು ಹೆಚ್ಚು ಇರುತ್ತದೆ! ಅದರ ರೆಸಿಪಿ ನೋಡೋಣವೇ?

1 ಲೋಟ ಅಕ್ಕಿ ತೊಳೆದು ಚಿಟಿಕೆ ಅರಿಶಿಣ, ಉಪ್ಪು, 2 ಲೋಟ ನೀರು ಹಾಕಿ ಬೇಯಿಸಿ, ತಣ್ಣಗಾಗಲು ತಟ್ಟೆಯಲ್ಲಿ ಹರಡಿಡಿ.

ಸ್ವಲ್ಪ ಕಾಯಿ ತುರಿದಿಡಿ.

ಕೊತ್ತಂಬರಿ ಸೊಪ್ಪು , ಹಸಿ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ.

   

ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ, ಸಾಸಿವೆ, ಕಡಲೇ ಬೇಳೆ, ಉದ್ದಿನ ಬೇಳೆ, ಕರಿಬೇವು, ಇಂಗು, ಹಸಿ ಮೆಣಸಿನಕಾಯಿ, ಕಡಲೇ ಬೀಜ ಹಾಕಿ ಹುರಿದು, ತಣ್ಣಗಾದ ಅನ್ನ, ಕೊತ್ತಂಬರಿ ಸೊಪ್ಪು, ನಿಂಬೆ ರಸ, ಕಾಯಿ ತುರಿ ಹಾಕಿ ಕಲೆಸಿದರೆ, ರುಚಿಯಾದ ಚಿತ್ರಾನ್ನ ಸಿದ್ಧ!

   

ಧನ್ಯವಾದಗಳು