ತಾಯಿ ದುರ್ಗಾ ಮತ್ತು ಸರಸ್ವತಿ ಇಬ್ಬರಿಗೂ ಬಹಳ ಪ್ರಿಯವಾದ ನೈವೇದ್ಯ!

ಹಾಗಾದರೆ ಕಿಚಡಿ ಮಾಡುವ ವಿಧಾನ ನೋಡೋಣವೇ?

ಮಾಡುವ ವಿಧಾನ:-

ನಿಮಗೆ ಬೇಕಾದ ತರಕಾರಿಗಳನ್ನು ತೊಳೆದು ಚಿಕ್ಕದಾಗಿ ಹೆಚ್ಚಿಡಿ. ಈ ಸಮಯದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಹಾಕುವ ಅಭ್ಯಾಸ ಕೆಲವು ಕಡೆ ಇರುವುದಿಲ್ಲ. ನಿಮಗೆ ಬೇಕಾದರೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ ಒಗ್ಗರಣೆಗೆ ಹಾಕಬಹುದು.

1 ಲೋಟ ಅಕ್ಕಿ, 1/2 ಲೋಟ ಹೆಸರು ಬೇಳೆ ತೊಳೆದು ನೀರು ಸೋರಿ ಹಾಕಿಡಿ.

   

1 ಇಂಚು ಶುಂಠಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ/ ತುರಿದಿಡಿ.

2 ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ.

ಕುಕ್ಕರಿನಲ್ಲಿ 4 ಚಮಚ ಎಣ್ಣೆ ಹಾಕಿ ಜೀರಿಗೆ, ಶುಂಠಿ, ಹೆಚ್ಚಿದ ಮೆಣಸಿನಕಾಯಿ, ತರಕಾರಿ ಹಾಕಿ ಸ್ವಲ್ಪ ಹುರಿದು, ನಂತರ ಅಕ್ಕಿ, ಹೆಸರು ಬೇಳೆ ಹಾಕಿ ಹುರಿದು, 1 ಚಮಚ ಖಾರಾ ಪುಡಿ, 1/2 ಚಮಚ ಗರಂ ಮಸಾಲ ( Optional), ಅರಿಷಿಣ, ಉಪ್ಪು ಹಾಕಿ ಕಲೆಸಿ 4 1/2 ಅಥವಾ 5 ಲೋಟ ನೀರು ಹಾಕಿ ಕಲೆಸಿ, ಕುಕ್ಕರಿನಲ್ಲಿ 2 ವಿಷಲ್ ಕೂಗಿಸಿ.

ನಂತರ ಹೆಚ್ಚಿದ ಕೊತ್ತಂಬರಿ ಸೊಪ್ಪು, 2 ಚಮಚ ತುಪ್ಪ ಹಾಕಿ ಕಲೆಸಿದರೆ ದೇವಿಗೆ ಪ್ರಿಯವಾದ ಕಿಚಡಿ ಸಿದ್ಧ!

ಹುಳಿ ಬೇಕಾದರೆ ನಿಂಬೆ ರಸ ಹಾಕಿಕೊಳ್ಳಬಹುದು.

ಧನ್ಯವಾದಗಳು.