HAYAGREEVA ಹಯಗ್ರೀವ

Categories: Kannada, Tindi TinisuPublished On: November 24, 20170 Comments0.3 min read
Indu Jayaram
SHARE
ತುಂಬಾ ಸುಲಭವಾಗಿ ಮಾಡಬಹುದಾದ, ರುಚಿಯಾದ ರೆಸಿಪಿ. ಈಗ ದಸರಾ ಸಮಯ. ಪ್ರತಿ ದಿನ ದೇವಿಯ ನೈವೇದ್ಯಕ್ಕೆ ಸಿಹಿ ಅಡುಗೆ ಬೇಕು!

ಮಾಡುವ ವಿಧಾನ:-

1 ಲೋಟ ಕಡಲೇ ಬೇಳೆ ತೊಳೆದು ಕುಕ್ಕರಿನಲ್ಲಿ 3 ಅಥವಾ 4 ವಿಷಲ್ ಕೂಗಿಸಿಡಿ. ( ನಾನು ಬೇಳೆ 2 ಗಂಟೆ ನೆನೆಸಿ ಮಾಡಿದ್ದೇನೆ. 1 ವಿಷಲ್ ಕೂಗಿಸಿದ್ದೇನೆ) ನಂತರ ಕಡಲೇ ಬೇಳೆ ಸೋರಿ ಹಾಕಿಡಿ.

   

1 ಅಥವಾ 3/4 ಲೋಟ ಬೆಲ್ಲ ತುರಿದಿಡಿ.

4 ಚಮಚ ಒಣ ಕೊಬ್ಬರಿ / ಕಾಯಿ ತುರಿ ತುರಿದಿಡಿ.

ಸ್ವಲ್ಪ ಗೋಡಂಬಿ, ಬಾದಾಮಿ, ದ್ರಾಕ್ಷಿ , 4 ಮುರಿದ ಲವಂಗ ತುಪ್ಪದಲ್ಲಿ ಹುರಿದಿಡಿ.

   

2 ಏಲಕ್ಕಿ ಪುಡಿ ಮಾಡಿಡಿ.

ಬಾಣಲೆಯಲ್ಲಿ ಬೆಲ್ಲದ ಪುಡಿ ಹಾಕಿ ಸ್ವಲ್ಪ ನೀರು ಹಾಕಿ ಕರಗಿದ ಮೇಲೆ, ಬೆಂದ ಕಡಲೇ ಬೇಳೆ ಹಾಕಿ ಸ್ವಲ್ಪ ಗಟ್ಟಿಯಾದ ಮೇಲೆ, ಕಾಯಿ ತುರಿ, ಹುರಿದ Dry fruits, ಏಲಕ್ಕಿ ಪುಡಿ ಹಾಕಿ ಕಲೆಸಿದರೆ ರುಚಿಯಾದ ಹಯಗ್ರೀವ ಸಿದ್ಧ!

ಧನ್ಯವಾದಗಳು.

About the Author: Indu Jayaram

Indu Jayaram is a homemaker and regularly writes on home cooked food. She has more than 10,000 followers in her facebook page https://www.facebook.com/pg/indumathijayaram/

Leave A Comment