ಸಾಮಾನ್ಯವಾಗಿ ಕೊಬ್ಬರಿ ಮಿಠಾಯಿ ಸಕ್ಕರೆ ಹಾಕಿ ಮಾಡೋದು ಜಾಸ್ತಿ! ಬದಲಾವಣೆಗಾಗಿ ಬೆಲ್ಲ ಹಾಕಿ ಮಾಡಿ . ಖಂಡಿತಾ ಇಷ್ಟ ಆಗುತ್ತೆ!

ಮಾಡುವ ವಿಧಾನ:-

3/4 ಲೋಟ ಬೆಲ್ಲ ಪುಡಿ ಮಾಡಿಡಿ.

1 ಲೋಟ ಕಾಯಿ ತುರಿಗೆ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಡಿ.

   

ದಪ್ಪ ತಳದ ಬಾಣಲೆಯಲ್ಲಿ ಎರಡನ್ನೂ ಸೇರಿಸಿ ಚೆನ್ನಾಗಿ ಕಲೆಸಿ ಒಲೆಯ ಮೇಲಿಡಿ.

ಬೆಲ್ಲ ಕರಗಿ ಕಾಯಿ ತುರಿಯೊಂದಿಗೆ ಬೆರೆತು ಚೆನ್ನಾಗಿ ಬೆಂದ ಮೇಲೆ ಒಂದೇ ಮುದ್ದೆಯಂತೆ ಆದಾಗ ಚಿಟಿಕೆ ಏಲಕ್ಕಿ ಪುಡಿ ಹಾಕಿ ಕಲೆಸಿ ತುಪ್ಪ ಸವರಿದ ತಟ್ಟೆಗೆ ಸುರಿದು ತಟ್ಟಿ, ಸ್ವಲ್ಪ ತಣ್ಣಗಾದ ಮೇಲೆ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ ಸವಿಯಿರಿ!

   

ಮಾಡಿದ ತಕ್ಷಣ ಸ್ವಲ್ಪ ಮೆತ್ತಗಿರುತ್ತದೆ. ತಣ್ಣಗಾದ ನಂತರ ಗಟ್ಟಿಯಾಗಿ ಆಗುತ್ತದೆ ಈ ಮಿಠಾಯಿ!

ಧನ್ಯವಾದಗಳು.