ಆಂಧ್ರ ಪ್ರದೇಶದ ಸುಪ್ರಸಿದ್ಧ Side dish! ಬಿಸಿ ಬಿಸಿ ಅನ್ನದ ಜೊತೆಗೆ ಒಂದು ಚಮಚ ತುಪ್ಪ ಹಾಕಿ ತಿಂದರೆ ಆಹಾ! ಜೊತೆಗೆ ಕರಿದ ಉದ್ದಿನ ಹಪ್ಪಳ ಇದ್ದರೇ!!!???

ಮಾಡುವ ವಿಧಾನ:-

ನಿಮಗೆ ಬೇಕಾದ ಸೊಪ್ಪು ತೊಳೆದು ಸಣ್ಣಗೆ ಹೆಚ್ಚಿಡಿ. ಚಕ್ಕೋತನೆ ಸೊಪ್ಪು, ಪಾಲಾಕ್ ಸೊಪ್ಪು ತುಂಬಾ ಚೆನ್ನಾಗಿರುತ್ತದೆ. ಸ್ವಲ್ಪ ಸೊಪ್ಪು ಹೆಚ್ಚು ಬೇಕಾಗುತ್ತದೆ. ನಾಲ್ಕೈದು ಕಟ್ಟು ಹಾಕಿದರೂ ಚೆನ್ನಾಗಿರುತ್ತದೆ. (ಚಕ್ಕೋತನೆ ಸೊಪ್ಪಿನ ಫೋಟೋ ಹಾಕಿದ್ದೇನೆ ನೋಡಿ)

1 ಈರುಳ್ಳಿ, 2 ಟೋಮೋಟೋ, 2 ಬೆಳ್ಳುಳ್ಳಿ, 6 ಹಸಿ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ. ಖಾರಾ ನಿಮಗೆ ಬೇಕಾಗುವಷ್ಟು ಹಾಕಿ ಮಾಡಿ.

2 ಚಮಚ ಹುಣಿಸೆ ರಸ ತೆಗೆದಿಡಿ.

   

ಕುಕ್ಕರಿನಲ್ಲಿ 1 ಲೋಟ ಬೇಳೆ ತೊಳೆದು ಹಾಕಿ, ಚಿಟಿಕೆ ಅರಿಷಿಣ , ಹೆಚ್ಚಿದ ಸೊಪ್ಪು, ಈರುಳ್ಳಿ, ಬೆಳ್ಳುಳ್ಳಿ, ಟೋಮೇಟೋ, ಹಸಿ ಮೆಣಸಿನಕಾಯಿ, ಸ್ವಲ್ಪ ನೀರು ಹಾಕಿ 3 ಅಥವಾ 4 ವಿಷಲ್ ಕೂಗಿಸಿಡಿ. ಸೊಪ್ಪು ಮತ್ತು ಬೇಳೆ ಚೆನ್ನಾಗಿ ಬೆಂದಿರಬೇಕು.

ನಂತರ ಬೆಂದ ಬೇಳೆ, ಸೊಪ್ಪನ್ನು ಸ್ವಲ್ಪ ಮಸೆದು ಹುಣಿಸೆ ರಸ, ಉಪ್ಪು, ಬೇಕಾದರೆ ಸ್ವಲ್ಪ ನೀರು ಸೇರಿಸಿ ಕುದಿಸಿ.

ಕೊನೆಯಲ್ಲಿ ಒಗ್ಗರಣೆಗೆ ಸಾಸಿವೆ, ಜೀರಿಗೆ, ಕರಿಬೇವು , ಜಜ್ಜಿದ ಬೆಳ್ಳುಳ್ಳಿ ಸ್ವಲ್ಪ ಹಾಕಿ ಬೇಳೆ ಮಿಶ್ರಣಕ್ಕೆ ಹಾಕಿದರೆ ರುಚಿಯಾದ, Spicy ಯಾದ ಆಂಧ್ರ ಪಪ್ಪು ಸಿದ್ಧ!

ಧನ್ಯವಾದಗಳು.