ALASANDE CURRY ಅಲಸಂದೆ ಕರ್ರಿ
ಚಪಾತಿ, ಅನ್ನ, ರೊಟ್ಟಿ ಜೊತೆಗೆ ಒಳ್ಳೆಯ Combination! ನಾನು ಹಸಿ ಅಲಸಂದೆ ಕಾಳು ಹಾಕಿ ಮಾಡಿದ್ದೇನೆ. ನೆನೆಸಿದ ಕಡಲೇ ಕಾಳು, ಹೆಸರು ಕಾಳು, ಅಲಸಂದೆ ಕಾಳಿನಲ್ಲಿ ಬೇಕಾದರೂ ಮಾಡಬಹುದು.
ಕಾಳನ್ನು ಬೇಯಿಸಿಡಿ.
1 ಈರುಳ್ಳಿ, 2 ಟೊಮೆಟೊ ಸಣ್ಣಗೆ ಹೆಚ್ಚಿಡಿ.
ಕಾಯಿ ತುರಿ 6 ಚಮಚ ತುರಿದಿಡಿ.
ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ, 1 ಚಮಚ ಜೀರಿಗೆ, ಹೆಚ್ಚಿದ ಈರುಳ್ಳಿ, ಟೊಮೆಟೊ ಹಾಕಿ ಸ್ವಲ್ಪ ಹುರಿದಿಡಿ.
ಬ್ಯಾಡಗಿ ಮೆಣಸಿನಕಾಯಿ ನಿಮಗೆ ಖಾರಾ ಬೇಕಾದಷ್ಟು ಸ್ವಲ್ಪ ಎಣ್ಣೆ ಹಾಕಿ ಹುರಿದು ಪುಡಿ ಮಾಡಿಟ್ಟುಕೊಳ್ಳಿ.
ಹುರಿದ ಈರುಳ್ಳಿ, ಟೋಮೇಟೋ,ಬ್ಯಾಡಗಿ ಮೆಣಸಿನಕಾಯಿ ಪುಡಿ, ಕಾಯಿ ತುರಿ ಹಾಕಿ ನುಣ್ಣಗೆ ರುಬ್ಬಿಡಿ.
ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ, ಸಾಸಿವೆ, ಕರಿಬೇವು, ಚಿಟಿಕೆ ಅರಿಶಿಣ, ರುಬ್ಬಿದ ಮಿಶ್ರಣ ಹಾಕಿ ಸ್ವಲ್ಪ ಹುರಿದು, ಬೆಂದ ಕಾಳು, 1 ಚಮಚ ಹುಣಿಸೆ ರಸ, ಉಪ್ಪು, ಸ್ವಲ್ಪ ನೀರು ಹಾಕಿ ಕುದಿಸಿ, ಕೊನೆಯಲ್ಲಿ ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿದರೆ, ರುಚಿಯಾದ ಅಲಸಂದೆ ಕರ್ರಿ ಸಿದ್ಧ!
ಧನ್ಯವಾದಗಳು.