ಅಕ್ಕಿ ರೊಟ್ಟಿ ಎಲ್ಲರ ಪ್ರಿಯವಾದ ತಿಂಡಿ. ಜೊತೆಗೆ ಸ್ವಲ್ಪ ಬೇಯಿಸಿದ ಅವರೆ ಕಾಳು ಹಾಕಿದರೆ! ಆಹಾ ಮತ್ತಷ್ಟು ರುಚಿ!

ಮಾಡುವ ವಿಧಾನ:-

1/2 ಲೋಟ ಅವರೆ ಕಾಳು ಬೇಯಿಸಿ ಇಡಿ.

1 ಈರುಳ್ಳಿ ಸಣ್ಣಗೆ ಹೆಚ್ಚಿಡಿ.

ಸ್ವಲ್ಪ ಕೊತ್ತಂಬರಿ ಸೊಪ್ಪು ತೊಳೆದು ಸಣ್ಣಗೆ ಹೆಚ್ಚಿಡಿ

4 ಚಮಚ ಕಾಯಿ ತುರಿದಿಡಿ.

   

1 ಲೋಟ ಅಕ್ಕಿ ಹಿಟ್ಟಿಗೆ, ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಬೇಯಿಸಿದ ಅವರೆ ಕಾಳು, ಉಪ್ಪು, ಕಾಯಿ ತುರಿ, 1 ಚಮಚ ಜೀರಿಗೆ, 1 ಚಮಚ ಎಣ್ಣೆ ಹಾಕಿ ಚೆನ್ನಾಗಿ ಕಲೆಸಿ, ಅವರೆ ಕಾಳು ಬೆಂದ ನೀರು ಹಾಕಿ ರೊಟ್ಟಿ ಹಿಟ್ಟು ಕಲೆಸಿಡಿ.

   

 

ನೆಲ್ಲಿಕಾಯಿ ತೊಕ್ಕು

ಬೆಟ್ಟದ ನೆಲ್ಲಿ ಕಾಯಿಯಲ್ಲಿ ಬೆಟ್ಟದಷ್ಟು ಆರೋಗ್ಯಕರ ಅಂಶ ತುಂಬಿದೆ. ಅದರ ರುಚಿಯಾದ ತೊಕ್ಕು ಮಾಡುವ ರೆಸಿಪಿ ಇಲ್ಲಿದೆ!

ಮಾಡುವ ವಿಧಾನ:-

8 ರಿಂದ 10 ಬೆಟ್ಟದ ನೆಲ್ಲಿ ಕಾಯಿ ತೊಳೆದು ಕುಕ್ಕರಿನಲ್ಲಿ ಹಾಕಿ ಒಂದು ವಿಷಲ್ ಕೂಗಿಸಿ, ಬೀಜ ತೆಗೆದಿಡಿ.

1/2 ಚಮಚ ಜೀರಿಗೆ, 1/2 ಚಮಚ ಸಾಸಿವೆ, 1/2 ಚಮಚ ಮೆಂತ್ಯ ಎಣ್ಣೆ ಹಾಕದೆ ಹುರಿದಿಡಿ. ನಿಮಗೆ ಖಾರಾ ಬೇಕಾದಷ್ಟು ಬ್ಯಾಡಗಿ ಮೆಣಸಿನ ಕಾಯಿ ಸ್ವಲ್ಪ ಎಣ್ಣೆ ಹಾಕಿ ಹುರಿದು, ಇತರ ಹುರಿದ ಸಾಮಗ್ರಿಗಳ ಜೊತೆ ಪುಡಿ. ನಂತರ ಬೆಂದ ನೆಲ್ಲಿ ಕಾಯಿ ಹಾಕಿ ಸುಮ್ಮನೆ ಒಂದು ಸುತ್ತು ಸುತ್ತಿದರೆ ಸಾಕು.

ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಸಾಸಿವೆ, ಇಂಗು, ಕರಿಬೇವು ಹಾಕಿ, ರುಬ್ಬಿದ ಮಿಶ್ರಣವನ್ನು ಹಾಕಿ ಉಪ್ಪು ಸೇರಿಸಿ ಕಲೆಸಿ ಸ್ವಲ್ಪ ಬಿಸಿ ಮಾಡಿದರೆ ರುಚಿಯಾದ ನೆಲ್ಲಿ ಕಾಯಿ ತೊಕ್ಕು ಸಿದ್ಧ!

ಧನ್ಯವಾದಗಳು.