Day: November 24, 2017

SABUDANA HALVA ಸಾಬೂದಾನ ಹಲ್ವಾ

ಸುಲಭವಾಗಿ ಮಾಡಬಹುದಾದ ಸಿಹಿ! ಮಾಡುವ ವಿಧಾನ:- 1 ಲೋಟ ಸಾಬೂದಾನ (ಸಬ್ಬಕ್ಕಿ ) ಯನ್ನು ರಾತ್ರಿ ಪೂರ ನೆನೆಸಿಡಿ.     ಬೆಳಿಗ್ಗೆ ನೀರಿನಿಂದ ತೆಗೆದು 3 ಲೋಟ ಗಟ್ಟಿಯಾದ ಹಾಲು ಹಾಕಿ ದಪ್ಪ ತಳದ ಪಾತ್ರೆಯಲ್ಲಿ ಬೇಯಲು ಇಡಿ. ಸಾಬೂದಾನ ಬೆಂದ ಮೇಲೆ ಉರಿ ಕಡಿಮೆ ಮಾಡಿ, 1/2 ಅಥವಾ 3/4 ಲೋಟ ಸಕ್ಕರೆ (ನಿಮ್ಮ ರುಚಿಗೆ ತಕ್ಕಷ್ಟು ಸಿಹಿ) ಹಾಕಿ, ಸಾಬೂದಾನ ಪೂರಾ ಬೆಂದು ಗಟ್ಟಿಯಾಗಿ ಆಗುವವರೆಗೆ ಬೇಯಿಸಿ. ಸ್ವಲ್ಪ ತುಪ್ಪ ಹಾಕಿ ಚೆನ್ನಾಗಿ …

SABUDANA HALVA ಸಾಬೂದಾನ ಹಲ್ವಾ Read More »

RASA MALAI ರಸ ಮಲೈ

ಜನಪ್ರಿಯ ಬೆಂಗಾಲಿ ಸಿಹಿ ರೆಸಿಪಿ! ಮಾಡುವ ವಿಧಾನ:- 1/2 ಲೀಟರ್ ಗಟ್ಟಿಯಾದ ಹಾಲು ಕಾಯಲು ಇಡಿ. ಹಾಲು ಬಿಸಿ ಆದ ಮೇಲೆ ಸ್ವಲ್ಪ ಗಟ್ಟಿಯಾದ ಮೊಸರು ಹಾಕಿ ಹಾಲು ಒಡೆಯುವಂತೆ ಮಾಡಿ. ಒಡೆದ ಹಾಲನ್ನು ತೆಳುವಾದ ಬಟ್ಟೆ ಮೇಲೆ ಹಾಕಿ ನೀರಿನಂಶ ತೆಗೆಯಿರಿ. ಹುಳಿ ಅಂಶ ಹೋಗಲು ಸ್ವಲ್ಪ ನೀರು ಹಾಕಿ ಒಂದು ಭಾರವಾದ ವಸ್ತುವನ್ನು ಇಟ್ಟು ಪನ್ನೀರ್ ಸಿದ್ಧ ಮಾಡಿ ಕೊಳ್ಳಿ.       ಪನ್ನೀರ್ ಅನ್ನು ಚೆನ್ನಾಗಿ ನಾದಿ ಪುಟ್ಟ ಉಂಡೆ ಮಾಡಿ ಸ್ವಲ್ಪ …

RASA MALAI ರಸ ಮಲೈ Read More »

AKKI ROTTI & NELLI KAYI THOKKU ಅಕ್ಕಿ ರೊಟ್ಟಿ ಮತ್ತು ನೆಲ್ಲಿ ಕಾಯಿ ತೊಕ್ಕು

ಅಕ್ಕಿ ರೊಟ್ಟಿ ಎಲ್ಲರ ಪ್ರಿಯವಾದ ತಿಂಡಿ. ಜೊತೆಗೆ ಸ್ವಲ್ಪ ಬೇಯಿಸಿದ ಅವರೆ ಕಾಳು ಹಾಕಿದರೆ! ಆಹಾ ಮತ್ತಷ್ಟು ರುಚಿ! ಮಾಡುವ ವಿಧಾನ:- 1/2 ಲೋಟ ಅವರೆ ಕಾಳು ಬೇಯಿಸಿ ಇಡಿ. 1 ಈರುಳ್ಳಿ ಸಣ್ಣಗೆ ಹೆಚ್ಚಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ತೊಳೆದು ಸಣ್ಣಗೆ ಹೆಚ್ಚಿಡಿ 4 ಚಮಚ ಕಾಯಿ ತುರಿದಿಡಿ.     1 ಲೋಟ ಅಕ್ಕಿ ಹಿಟ್ಟಿಗೆ, ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಬೇಯಿಸಿದ ಅವರೆ ಕಾಳು, ಉಪ್ಪು, ಕಾಯಿ ತುರಿ, 1 ಚಮಚ ಜೀರಿಗೆ, …

AKKI ROTTI & NELLI KAYI THOKKU ಅಕ್ಕಿ ರೊಟ್ಟಿ ಮತ್ತು ನೆಲ್ಲಿ ಕಾಯಿ ತೊಕ್ಕು Read More »

GOJJAVALLAKI ಗೊಜ್ಜವಲಕ್ಕಿ

ಶ್ರೀ ಕೃಷ್ಣನಿಗೆ ಪ್ರಿಯವಾದ ಅವಲಕ್ಕಿ ನಮಗೂ ಸಹ ಪ್ರಿಯವೇ! ಅದರಲ್ಲೂ ಗೊಜ್ಜವಲಕ್ಕಿ ಯಾರಿಗೆ ಇಷ್ಟವಿಲ್ಲ ಹೇಳಿ! ಏಕಾದಶಿ, ಸಂಕಷ್ಟ ಹರ ಗಣಪತಿ ವ್ರತಗಳಲ್ಲಿ ಮಾಡುವ ವಿಧಾನ ಇಲ್ಲಿದೆ:- ಮಾಡುವ ವಿಧಾನ:- 1 ಪಾವು ಗಟ್ಟಿ ಅವಲಕ್ಕಿ ತೊಳೆದಿಡಿ. ಹುಣಿಸೆ ರಸ 4 ಚಮಚ ತೆಗೆದಿಡಿ, ಅದಕ್ಕೆ ಚೂರು ಬೆಲ್ಲ ಹಾಕಿ ಕರಗಿಸಿಡಿ. 4 ಚಮಚ ಕಾಯಿ ತುರಿದಿಡಿ. 2 ಚಮಚ ಬಿಳಿ ಎಳ್ಳು ಹುರಿದು ಪುಡಿ ಮಾಡಿಡಿ.     ತೊಳೆದ ಅವಲಕ್ಕಿಗೆ ಹುಣಿಸೆ ರಸ, ಉಪ್ಪು, …

GOJJAVALLAKI ಗೊಜ್ಜವಲಕ್ಕಿ Read More »

MEXICAN RICE ಮೆಕ್ಸಿಕನ್ ರೈಸ್

ರುಚಿಯಾದ, ಸುಲಭವಾಗಿ ಮಾಡಬಹುದಾದ ರೆಸಿಪಿ! ಮಾಡುವ ವಿಧಾನ:- 1 ಲೋಟ ಬಾಸುಮತಿ ಅಕ್ಕಿ ತೊಳೆದು ಕುಕ್ಕರಿನಲ್ಲಿ ಹಾಕಿ ಮುಚ್ಚಿಳ ಹಾಕದೆ ಬೇಯಿಸಿಟ್ಟುಕೊಳ್ಳಿ. 1 ಈರುಳ್ಳಿ , 1 ಬೆಳ್ಳುಳ್ಳಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. ತಲಾ ಒಂದೊಂದು ಕೆಂಪು, ಹಸಿರು, ಹಳದಿ ಬಣ್ಣದ ದಪ್ಪ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ. ಬೇರೆ ಬೇರೆ ಬಣ್ಣ ಸಿಗದಿದ್ದರೆ ಹಸಿರು ಬಣ್ಣದ ದಪ್ಪ ಮೆಣಸಿನಕಾಯಿ ಹಾಕಬಹುದು.        1 ಹಿಡಿ ಸ್ವೀಟ್ ಕಾರ್ನ್, 2 ಹಿಡಿ ನೆನೆಸಿದ ಅಥವಾ …

MEXICAN RICE ಮೆಕ್ಸಿಕನ್ ರೈಸ್ Read More »

SET DOSE ಸೆಟ್ ದೋಸೆ

ಮೆತ್ತಗೆ, ರುಚಿಯಾದ ಸೆಟ್ ದೋಸೆ ಎಲ್ಲರಿಗೂ ಇಷ್ಟವಾಗುವ ತಿಂಡಿ! ಮಾಡುವ ವಿಧಾನ:- ದೋಸೆ ಅಕ್ಕಿ – 4 ಲೋಟ ಉದ್ದಿನ ಬೇಳೆ – 1 ಲೋಟ ಗಟ್ಟಿ ಅವಲಕ್ಕಿ – 1/2 ಲೋಟ ಮೆಂತ್ಯ – 2 ಚಮಚ ಎಲ್ಲಾ ತೊಳೆದು ಬೇರೆ ಬೇರೆ 2 ಗಂಟೆ ನೆನೆಸಿಡಿ. ಉದ್ದಿನ ಬೇಳೆ ಮತ್ತು ಮೆಂತ್ಯ ನುಣ್ಣಗೆ ರುಬ್ಬಿ. ಅಕ್ಕಿ ಅವಲಕ್ಕಿ ಒಟ್ಟಿಗೆ ನುಣ್ಣಗೆ ರುಬ್ಬಿ ಉಪ್ಪು ಸೇರಿಸಿ ರಾತ್ರಿ ಪೂರ ಉದುಗು ಬರಲು ಬಿಡಿ. ಬೆಳಗ್ಗೆ ಸ್ವಲ್ಪ …

SET DOSE ಸೆಟ್ ದೋಸೆ Read More »

SHALYANNA ಶಾಲ್ಯಾನ್

ರುಚಿಯಾದ , ಸುಲಭವಾಗಿ ಮಾಡಬಹುದಾದ ಮತ್ತೊಂದು ರೆಸಿಪಿ! ನವರಾತ್ರಿಯ ವಿಶೇಷ ದಿನಗಳಲ್ಲಿ ಈ ಸಿಹಿ ಅನ್ನ ಮಾಡಿ, ಅದನ್ನು ದೇವಿಯ ಮೈಗೆಲ್ಲಾ ಅಂಟಿಸುತ್ತಾರೆ. ಶಾಲ್ಯಾನ್ನ ಅಲಂಕಾರ ಎಂದು ಹೆಸರು ಅದಕ್ಕೆ! ಹಾಗಾದರೆ ಅದರ ರೆಸಿಪಿ ನೋಡೋಣವೇ! ಮಾಡುವ ವಿಧಾನ:- 1 ಲೋಟ ಅಕ್ಕಿ ತೊಳೆದು ಅನ್ನ ಮಾಡಿಡಿ. ಅನ್ನ ತುಂಬಾ ಮೆತ್ತಗೂ ಇರಬಾರದು ಅಥವಾ ಉದುರುದುರಾಗಿಯೂ ಇರಬಾರದು. 1 ಲೋಟ ಅಕ್ಕಿ 2 1/2 ಲೋಟ ನೀರು ಹಾಕಿದರೆ ಸರಿಯಾಗಿರುತ್ತೆ. 4 ಚಮಚ ಒಣ ಕೊಬ್ಬರಿ ತುರಿದಿಡಿ. …

SHALYANNA ಶಾಲ್ಯಾನ್ Read More »

SURULI HOLIGE ಸುರುಳಿ ಹೋಳಿಗೆ

ಸುಲಭವಾಗಿ ಮಾಡಬಹುದಾದ, ಸ್ವಲ್ಪ ದಿನಗಳವರೆಗೆ ಮಾಡಿಟ್ಟು ತಿನ್ನಬಹುದಾದ ಹೋಳಿಗೆ! ಮಾಡುವ ವಿಧಾನ:- 1 ಬಟ್ಟಲು ಮೈದಾ, ಚಿಟಿಕೆ ಉಪ್ಪು ಹಾಕಿ ಚೆನ್ನಾಗಿ ಕಲೆಸಿ, ಸ್ವಲ್ಪ ನೀರು ಚಿಮುಕಿಸುತ್ತಾ ಪೂರಿ ಹಿಟ್ಟಿನ ಹದಕ್ಕೆ ಕಲೆಸಿ 1/2 ಮುಚ್ಚಿಡಿ. 1 ಲೋಟ ಸಕ್ಕರೆಗೆ 2 ಏಲಕ್ಕಿ, 1 ಲವಂಗ ಹಾಕಿ ಪುಡಿ ಮಾಡಿಡಿ. 6 ಚಮಚ ಒಣ ಕೊಬ್ಬರಿ ಪುಡಿ ಮಾಡಿಡಿ.      ಬೇಕಾದರೆ ಸ್ವಲ್ಪ ಗೋಡಂಬಿ, ಬಾದಾಮಿ, ವಾಲ್ ನಟ್ ಪುಡಿ ಮಾಡಿ ಸೇರಿಸಿ. 2 ಚಮಚ ಗಸಗಸೆ …

SURULI HOLIGE ಸುರುಳಿ ಹೋಳಿಗೆ Read More »

KICHADI ಕಿಚಡಿ

ತಾಯಿ ದುರ್ಗಾ ಮತ್ತು ಸರಸ್ವತಿ ಇಬ್ಬರಿಗೂ ಬಹಳ ಪ್ರಿಯವಾದ ನೈವೇದ್ಯ! ಹಾಗಾದರೆ ಕಿಚಡಿ ಮಾಡುವ ವಿಧಾನ ನೋಡೋಣವೇ? ಮಾಡುವ ವಿಧಾನ:- ನಿಮಗೆ ಬೇಕಾದ ತರಕಾರಿಗಳನ್ನು ತೊಳೆದು ಚಿಕ್ಕದಾಗಿ ಹೆಚ್ಚಿಡಿ. ಈ ಸಮಯದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಹಾಕುವ ಅಭ್ಯಾಸ ಕೆಲವು ಕಡೆ ಇರುವುದಿಲ್ಲ. ನಿಮಗೆ ಬೇಕಾದರೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ ಒಗ್ಗರಣೆಗೆ ಹಾಕಬಹುದು. 1 ಲೋಟ ಅಕ್ಕಿ, 1/2 ಲೋಟ ಹೆಸರು ಬೇಳೆ ತೊಳೆದು ನೀರು ಸೋರಿ ಹಾಕಿಡಿ.     1 ಇಂಚು ಶುಂಠಿ ಸಿಪ್ಪೆ …

KICHADI ಕಿಚಡಿ Read More »

SOPPINA RAVE IDLI ಸೊಪ್ಪಿನ ರವೆ ಇಡ್ಲಿ

ರವೆ ಇಡ್ಲಿ ಎಲ್ಲರೂ ಮಾಡುತ್ತಾರೆ, ಮನೆರ ಯಲ್ಲೂ ಮಾಡುತ್ತಾರೆ, ರೆಡಿ ಮೇಡ್ ಕೂಡಾ ಸಿಗುತ್ತದೆ! ಅದರಲ್ಲಿ ಏನು ವಿಶೇಷ ಅಂದಿರಾ? ರವೆಯನ್ನು ಹುರಿಯದೆ, ಧಾರಾಳವಾಗಿ ಸೊಪ್ಪು ಹಾಕಿ, ತಾಜಾ ಮೊಸರು ಹಾಕಿ ಮಾಡುವುದೇ ಈ ರೆಸಿಪಿ ವಿಶೇಷ!! ಸಾಮಾನ್ಯವಾಗಿ ರವೆ ಇಡ್ಲಿ ಎಲ್ಲರೂ ಹುರಿದು ಮಾಡುವುದು. ಹುರಿಯದ ರವೆ ಹಾಕಿ ಒಮ್ಮೆ ಮಾಡಿ ನೋಡಿ! ಮಾಡುವ ವಿಧಾನ:- 1 ಪಾವು ಮೀಡಿಯಂ ರವೆ ( ಉಪ್ಪಿಟ್ಟು ರವೆ) ಒಂದು ಬಟ್ಟಲಿನಲ್ಲಿ ಹಾಕಿಡಿ. 2 ಕಟ್ಟು ಪಾಲಾಕ್, 2 …

SOPPINA RAVE IDLI ಸೊಪ್ಪಿನ ರವೆ ಇಡ್ಲಿ Read More »