ತಿಂಡಿಗೆ, ಲಂಚ್ ಬಾಕ್ಸ್ ಗೆ ಬೇಗನೆ ಮಾಡಬಹುದಾದ ರೆಸಿಪಿ!

ಮಾಡುವ ವಿಧಾನ:-

4 ಟೋಮೇಟೋ, 1 ಈರುಳ್ಳಿ,4 ಹಸಿ ಮೆಣಸಿನಕಾಯಿ, 1 ಚಿಕ್ಕ ಬೆಳ್ಳುಳ್ಳಿ, 1/2 ಇಂಚು ಶುಂಠಿ ಸಣ್ಣಗೆ ಹೆಚ್ಚಿಡಿ.

4 ಚಮಚ ಕಾಯಿ ತುರಿದಿಡಿ.

1 ಲೋಟ ಅಕ್ಕಿ ತೊಳೆದು ನೀರು ಸೋರಿ ಹಾಕಿಡಿ. ನಾನು ಬಾಸುಮತಿ ಮತ್ತು ಸೋನಾ ಮಸೂರಿ ಅಕ್ಕಿ ಅರ್ಧ ಅರ್ಧ ಹಾಕಿದ್ದೇನೆ. ನೀವು ನಿಮಗೆ ಇಷ್ಟವಾದ ಅಕ್ಕಿ ಹಾಕಿ ಕೊಳ್ಳಿ.

ಕುಕ್ಕರಿನಲ್ಲಿ 4 ಚಮಚ ಎಣ್ಣೆ/ತುಪ್ಪ ಹಾಕಿ, 2 ಲವಂಗ, 1 ಏಲಕ್ಕಿ, 1/2 ಇಂಚು ಚಕ್ಕೆ, 1/2 ಚಮಚ ಜೀರಿಗೆ ಹಾಕಿ ಹುರಿದು, ನಂತರ ಕರಿಬೇವು, ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಹಸಿ ಮೆಣಸಿನಕಾಯಿ, ಟೋಮೇಟೋ, ಚಿಟಿಕೆ ಅರಿಶಿಣ ಹಾಕಿ ಬಾಡಿಸಿ.

ಸೋರಿ ಹಾಕಿದ ಅಕ್ಕಿ, ಉಪ್ಪು ಹಾಕಿ ಸ್ವಲ್ಪ ಹುರಿದು, 1 3/4 ಅಥವಾ 2 ಲೋಟ ನೀರು ಹಾಕಿ ಚೆನ್ನಾಗಿ ಕಲೆಸಿ, ಮುಚ್ಚಳ ಮುಚ್ಚಿ 2 ಅಥವಾ 3 ವಿಷಲ್ ಕೂಗಿಸಿಡಿ. ( ಅಕ್ಕಿ ಹಳೆಯದಾದರೆ ಹೆಚ್ಚು ನೀರು ಬೇಕಾಗುತ್ತದೆ).

   

ನಂತರ ಹೆಚ್ಚಿದ ಕೊತ್ತಂಬರಿ ಸೊಪ್ಪು, ಕಾಯಿ ತುರಿ ಹಾಕಿ ಅಲಂಕರಿಸಿದರೆ ರುಚಿಯಾದ ಟೋಮೇಟೋ ಬಾತ್ ಸಿದ್ಧ!

ಧನ್ಯವಾದಗಳು.