SHAHI THUKADA
ಸುಲಭವಾಗಿ, ರುಚಿಯಾಗಿ ಮಾಡಬಹುದಾದ ಸಿಹಿ ತಿಂಡಿ!SHAHI THUKADA

ಮಾಡುವ ವಿಧಾನ:-

8 ಬ್ರೆಡ್ ಸ್ಲೈಸ್ ಗಳ ಅಂಚನ್ನು ತೆಗೆದು ಮಧ್ಯದಲ್ಲಿ ತ್ರಿಕೋನಾಕಾರವಾಗಿ ಕತ್ತರಿಸಿ. ಬಾಣಲೆಯಲ್ಲಿ 4 ಚಮಚ ತುಪ್ಪ ಹಾಕಿ ಬ್ರೆಡ್ ಅನ್ನು ಕೆಂಪಗೆ ಕರಿದಿಡಿ.

1 ಲೋಟ ಸಕ್ಕರೆಗೆ 1/2 ಲೋಟ ನೀರು ಹಾಕಿ ಕುದಿಸಿ ಜಾಮೂನ್ ಪಾಕಕ್ಕಿಂತ ಸ್ವಲ್ಪ ಗಟ್ಟಿಯಾಗಿ ಪಾಕ ಮಾಡಿ ಬ್ರೆಡ್ ತುಂಡುಗಳನ್ನು ಅದರಲ್ಲಿ ಅದ್ದಿ 2 ಅಥವಾ 3 ನಿಮಿಷ ಸಕ್ಕರೆ ಪಾಕದಲ್ಲಿ ಬಿಟ್ಟು ತೆಗೆದಿಡಿ.

ರಬ್ರಿ ಮಾಡುವ ವಿಧಾನ:-

1/2 ಲೀಟರ್ ಗಟ್ಟಿಯಾದ ಹಾಲು ಕಾಯಲು ಇಡಿ. 1 ಚಮಚ ಬಿಸಿ ಹಾಲಿನಲ್ಲಿ ಸ್ವಲ್ಪ ಕೇಸರಿ ದಳ, 1 ಚಿಕ್ಕ ಚಮಚ ಕಾರ್ನ್ ಫ್ಲೋರ್ ಹಾಕಿ ಚೆನ್ನಾಗಿ ಕಲೆಸಿ ಕುದಿಯುವ ಹಾಲಿಗೆ ಹಾಕಿ.

ಹಾಲು ಕುದಿದು ಅರ್ಧ ಭಾಗದಷ್ಟು ಕಡಿಮೆ ಆದಾಗ 2 ಚಮಚ ಸಕ್ಕರೆ ಹಾಕಿ ಚೆನ್ನಾಗಿ ಕಲೆಸಿ. ಸಕ್ಕರೆ ಬದಲು ಹಾಲಿನ ಪುಡಿ ಬೇಕಾದರೆ ಹಾಕಬಹುದು. ರುಚಿ ಮತ್ತಷ್ಟು ಚೆನ್ನಾಗಿರುತ್ತದೆ.

   

ಗಟ್ಟಿಯಾದ ಹಾಲನ್ನು ಬ್ರೆಡ್ ತುಂಡುಗಳ ಮೇಲೆ ಪೂರ್ತಿಯಾಗಿ ಮುಳುಗುವಂತೆ ಹಾಕಿ, ಮೇಲೆ Dry fruits ಹಾಕಿ, Fridge ನಲ್ಲಿ 1 ಗಂಟೆ ಕಾಲ ಇಟ್ಟು ನಂತರ ಸವಿಯಿರಿ.

ಶಾಹಿ ತುಕಡಾ ತಣ್ಣಗಾದರೆ ರುಚಿ ಚೆಂದ!

ಧನ್ಯವಾದಗಳು.