MYSORE MASALA DOSA ಮೈಸೂರು ಮಸಾಲ ದೋಸೆ
ಮೈಸೂರು ಮಸಾಲ ದೋಸೆ ತುಂಬಾ ಗರಿ ಗರಿಯಾಗಿರುತ್ತದೆ. ಬಣ್ಣ ಕೂಡ ಕೆಂಪು!
ಮಾಡುವ ವಿಧಾನ:-
ದೋಸೆ ಅಕ್ಕಿ – 3 ಲೋಟ
ಉದ್ದಿನ ಬೇಳೆ – 1ಲೋಟ
ಗಟ್ಟಿ ಅವಲಕ್ಕಿ – 1/2 ಲೋಟ
ಕಡಲೇ ಬೇಳೆ – 1 ಚಮಚ
ತೊಗರಿ ಬೇಳೆ – 1 ಚಮಚ
ಮೆಂತ್ಯ – 1/8 ಚಮಚ
ಅಕ್ಕಿ ಮತ್ತು ಅವಲಕ್ಕಿಯನ್ನು ತೊಳೆದು ಒಟ್ಟಿಗೆ ನೆನೆಸಿಡಿ.
ಮಿಕ್ಕದ್ದೆಲ್ಲ ತೊಳೆದು ಒಟ್ಟಿಗೆ ನೆನೆಸಿಡಿ.
ಮೊದಲು ಉದ್ದಿನ ಬೇಳೆ ನುಣ್ಣಗೆ ರುಬ್ಬಿ.
ನಂತರ ಅಕ್ಕಿ ಅವಲಕ್ಕಿಯನ್ನು ನುಣ್ಣಗೆ ರುಬ್ಬಿ, ಉದ್ದಿನ ಬೇಳೆ ಮಿಶ್ರಣಕ್ಕೆ ಹಾಕಿ, ಉಪ್ಪು ಹಾಕಿ ಚೆನ್ನಾಗಿ ಕಲೆಸಿಡಿ.
ಮರುದಿನ ಬೆಳಿಗ್ಗೆ ಸ್ವಲ್ಪ ಸಕ್ಕರೆ, 2 ಚಮಚ ಅಕ್ಕಿ ಹಿಟ್ಟು ಹಾಕಿ ಕಲೆಸಿ, ಸಾಧಾರಣ ಮಸಾಲೆ ದೋಸೆ ಹಾಗೆ ಮಾಡಬಹುದು.
ಗ್ರೈಂಡರ್ ನಲ್ಲಿ ರುಬ್ಬುವುದಾದರೆ ಎಲ್ಲಾ ಒಟ್ಟಿಗೇ ನೆನೆಸಿ, ಒಟ್ಟಿಗೆ ರುಬ್ಬಬಹುದು.
ಎಣ್ಣೆ ಬದಲು ಬೆಣ್ಣೆ ಹಾಕಿದರೆ ಮಸಾಲೆ ದೋಸೆ ಮತ್ತಷ್ಟು ರುಚಿಯಾಗಿರುತ್ತದೆ.
ಹಾಲಿನ ಚಟ್ನಿ (ಬಿಳಿ ಚಟ್ನಿ) ಮಾಡುವ ವಿಧಾನ:-
ಕಾಯಿ ತುರಿ, ಹುರಿ ಗಡಲೆ, ಹಸಿ ಮೆಣಸಿನಕಾಯಿ, ಉಪ್ಪು ಇಷ್ಟನ್ನು ಹಾಲು ಹಾಕಿ ರುಬ್ಬಿದರೆ ಹಾಲು ಚಟ್ನಿ ಸಿದ್ಧ! ಈ ಚಟ್ನಿಗೆ ಹಾಲು ಹಾಕುವುದರಿಂದ ಹುಳಿ ಹಾಕುವುದಿಲ್ಲ.
ಟೋಮೇಟೋ ಚಟ್ನಿ (ಕೆಂಪು ಚಟ್ನಿ) ಮಾಡುವ ವಿಧಾನ:-
4 ಹೆಚ್ಚಿದ ಟೋಮೇಟೋ, 2 ಚಮಚ ಉದ್ದಿನ ಬೇಳೆ, 5 ಅಥವಾ 6 ಬ್ಯಾಡಗಿ ಮೆಣಸಿನಕಾಯಿ ಕಾಯಿ ಸ್ವಲ್ಪ ಎಣ್ಣೆ ಹಾಕಿ ಹುರಿದು, ತಣ್ಣಗಾದ ಮೇಲೆ ಉಪ್ಪು, ಚೂರು ಬೆಲ್ಲ ಅಥವಾ ಸಕ್ಕರೆ ಸೇರಿಸಿ ತರಿ ತರಿಯಾಗಿ ರುಬ್ಬಿ ಒಗ್ಗರಣೆ ಹಾಕಿದರೆ ರುಚಿಯಾದ ಟೋಮೇಟೋ ಚಟ್ನಿ ಸಿದ್ಧ! ಪುಲ್ಕಾ, ಚಪಾತಿ, ಇಡ್ಲಿ ಜೊತೆಗೆ ಒಳ್ಳೆಯ Combination!
ಧನ್ಯವಾದಗಳು