ಮಿನಿ ಬಾದುಷಾ ಮಾಡುವ ವಿಧಾನ :-
2 ಲೋಟ ಸಕ್ಕರೆಗೆ 1 ಲೋಟ ನೀರು ಹಾಕಿ
ಒಂದೆಳೆ ಪಾಕ ಮಾಡಿ ಕೊಂಡು, ಚಿಟಿಕೆ ಏಲಕ್ಕಿ ಪುಡಿ, ಸ್ವಲ್ಪ ನಿಂಬೆ ರಸ ಹಾಕಿ ಕಲೆಸಿ, ಒಂದು ತಟ್ಟೆ ಮುಚ್ಚಿಡಿ.
ಬಾದುಷಾ ಹಿಟ್ಟು ತಯಾರಿಸಲು 1 ಲೋಟ ಮೈದಾ ಹಿಟ್ಟಿಗೆ, 1/4 ಲೋಟ ತುಪ್ಪ ಬಿಸಿಯಾಗಲು ಇಡಿ. ತುಪ್ಪದ ಬದಲು ವನಸ್ಪತಿ ಹಾಕಬಹುದು.
1/2 ಚಮಚ ಬೇಕಿಂಗ್ ಪೌಡರ್, ಚಿಟಿಕೆ ಉಪ್ಪು, ಚಿಟಿಕೆ ಸಕ್ಕರೆ ಹಾಕಿ ಚೆನ್ನಾಗಿ ಕಲೆಸಿ.
4 ಚಮಚ ಗಟ್ಟಿಯಾದ ಮೊಸರು ಹಾಕಿ ಮತ್ತೊಮ್ಮೆ ಕಲೆಸಿ, ಬಿಸಿಯಾದ ತುಪ್ಪ ಹಾಕಿ ಕಲೆಸಿ. ಜಾಮೂನ್ ಹಿಟ್ಟಿನ ಹಾಗೆ ಮೃದುವಾಗಿ ಕಲೆಸಿ. ಚಪಾತಿ ಹಿಟ್ಟಿನ ಹಾಗೆ ನಾದಬಾರದು.
ನೀರು ಬೇಕಾದರೆ ಚಮಚದಲ್ಲಿ ಹಾಕಿ. ಇಲ್ಲದಿದ್ದರೆ ಮೊಸರು ಮತ್ತು ತುಪ್ಪ ಸಾಕಾಗುವುದು.
10 ನಿಮಿಷ ಕಲೆಸಿದ ಮಿಶ್ರಣ ಮುಚ್ಚಿಡಿ.
ಬಾಣಲೆಯಲ್ಲಿ ಎಣ್ಣೆ ಅಥವಾ ತುಪ್ಪ ಹಾಕಿ ಕಾಯಲು ಇಡಿ. ಉರಿ ಪೂರ್ತಿಯಾಗಿ ಕಡಿಮೆ ಮಾಡಿ.
ಕೈಗೆ ಸ್ವಲ್ಪ ತುಪ್ಪ ಸವರಿ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಸ್ವಲ್ಪ ಒತ್ತಿ, ಮಧ್ಯದಲ್ಲಿ ಒಂದು ರಂಧ್ರ ಮಾಡಿಡಿ. ಹೀಗೆ ಮಾಡುವುದರಿಂದ ಬಾದುಷಾ ಚೆನ್ನಾಗಿ ಬೇಯುತ್ತದೆ.
ಬಾದುಷಾಗಳನ್ನು ಒಂದೊಂದಾಗಿ ಕಾದ ಎಣ್ಣೆಯಲ್ಲಿ ಬಿಡಿ. ಅದು ಬೆಂದ ಮೇಲೆ ತಾನಾಗೇ ಮೇಲೆ ಬರುವವರೆಗೆ ಬಿಡಿ.
ನಂತರ ತಿರುವಿ ಹಾಕಿ, ಕೆಂಪಗೆ ಆಗುವವರೆಗೆ ಬೇಯಿಸಿ, ಸಕ್ಕರೆ ಪಾಕದಲ್ಲಿ ಹಾಕಿ, 2 ನಿಮಿತ್ತ ನೆನೆಸಿಡಿ.
ನಂತರ ಪಾಕದಿಂದ ಹೊರ ತೆಗೆದು ಹೆಚ್ಚಿದ ಬಾದಾಮಿಯಿಂದ ಅಲಂಕರಿಸಿ ಸವಿಯಿರಿ.
ಬಾದುಷಾ ಹಾಕುವಾಗ ಸಕ್ಕರೆ ಪಾಕ ಬಿಸಿ ಇರಬಾರದು.
ಮತ್ತು ಬಾದುಷಾಗಳನ್ನು ಕಡಿಮೆ ಉರಿಯಲ್ಲಿ ಕರಿಯಬೇಕು.
ನಾನು ಸ್ವಲ್ಪ ಚಿಕ್ಕ ಚಿಕ್ಕದಾಗಿ ಬಾದುಷಾ ಮಾಡಿದ್ದೀನಿ. ಒಳಗಡೆ ಚೆನ್ನಾಗಿ ಬೆಂದಿದೆ. ನೀವು ಬೇಕಾದರೆ ಸಾಧಾರಣವಾಗಿ ಭಾಡುವ ಅಳತೆಯಲ್ಲಿ ಮಾಡಿಕೊಳ್ಳಬಹುದು.
ಧನ್ಯವಾದಗಳು.
Leave A Comment