ಸಾಮಾನ್ಯವಾಗಿ ಎಲ್ಲರೂ ಮಾಡುವ ರೆಸಿಪಿ!
ಮಾಡುವ ವಿಧಾನ:-
1 ಲೋಟ ಅಕ್ಕಿ 2 ಗಂಟೆ ನೆನೆಸಿಡಿ.
1 ಲೋಟ ಕಾಯಿ ತುರಿದಿಡಿ.
1 ಲೋಟ ಬೆಲ್ಲ ಪುಡಿ ಮಾಡಿಡಿ.
ನೆಂದ ಅಕ್ಕಿ ಮತ್ತು ಕಾಯಿ ತುರಿಯನ್ನು ಸ್ವಲ್ಪ ನೀರು ಸೇರಿಸಿ ನುಣ್ಣಗೆ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿ.
ದಪ್ಪ ತಳದ ಬಾಣಲೆಯಲ್ಲಿ 1 ಲೋಟ ಬೆಲ್ಲದ ಪುಡಿ 1/2 ಲೋಟ ನೀರು ಹಾಕಿ ಬಿಸಿಯಾಗಲು ಇಡಿ. ಬೆಲ್ಲ ಕರಗಿದ ನಂತರ ರುಬ್ಬಿದ ಅಕ್ಕಿ ಮಿಶ್ರಣವನ್ನು ಬೆಲ್ಲದ ಪಾಕಕ್ಕೆ ಸೇರಿಸಿ, ಚೆನ್ನಾಗಿ ಕಲೆಸಿ.
ಉರಿ ಮಧ್ಯಮ ಮಾಡಿ ಕೈ ಬಿಡದಂತೆ ಕಲೆಸುತ್ತಾ ಇರಿ. ಕೈಬಿಟ್ಟರೆ ಗಂಟು ಗ್ಯಾರಂಟಿ!
ಈಗ ಬೇಕಾದರೆ ಸ್ವಲ್ಪ ತುಪ್ಪ ಸೇರಿಸಿ ಚೆನ್ನಾಗಿ ಕಲೆಸಿ. ಚಿಟಿಕೆ ಏಲಕ್ಕಿ ಪುಡಿ ಹಾಕಿ. ಮಿಶ್ರಣ ಚೆನ್ನಾಗಿ ಬೆಂದು, ಒಂದೇ ಉಂಡೆಯಂತೆ ಆದಾಗ ಒಲೆಯಿಂದ ತೆಗೆದು ತುಪ್ಪ ಸವರಿದ ತಟ್ಟೆಗೆ ಸುರಿದು ಸ್ವಲ್ಪ ತಣ್ಣಗಾದ ಮೇಲೆ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ ಸವಿಯಿರಿ.
ಒದ್ದೆ ಕೈಯಿಂದ ಮುಟ್ಟಿದರೆ ಮಿಶ್ರಣ ಕೈಗೆ ಅಂಟದಿದ್ದರೆ ಬೆಂದಿದೆಯೆಂದು ಅರ್ಥ!
ಧನ್ಯವಾದಗಳು.
Leave A Comment