ರುಚಿಯಾದ, ಸುಲಭವಾಗಿ ಮಾಡಬಹುದಾದ, ಚಪಾತಿ, ಅನ್ನ, ರೊಟ್ಟಿ, ದೋಸೆ ಜೊತೆಗೆ ತುಂಬಾ ಚೆನ್ನಾಗಿರುವ ಕರ್ರಿ!

ಮಾಡುವ ವಿಧಾನ:-

1/2 ಲೋಟ ಕಡಲೇ ಬೀಜ ಹುರಿದು ಸಿಪ್ಪೆ ತೆಗೆದಿಡಿ.

1 ಚಮಚ ಧನಿಯ, 2 ಚಮಚ ಗಸಗಸೆ, 1/2 ಇಂಚು ಚಕ್ಕೆ, 2 ಲವಂಗ, 6 ರಿಂದ 8 ಬ್ಯಾಡಗಿ ಮೆಣಸಿನ ಕಾಯಿ ಹುರಿದಿಡಿ.

    

ಹುರಿದ ಸಾಮಗ್ರಿಗಳನ್ನು ಪುಡಿ ಮಾಡಿ 2 ಚಮಚ ಕಾಯಿ ತುರಿ ಹಾಕಿ ನುಣ್ಣಗೆ ರುಬ್ಬಿಡಿ.

ಕಡಲೇ ಬೀಜ ತರಿ ತರಿಯಾಗಿ ಪುಡಿ ಮಾಡಿಡಿ.

2 ಚಮಚ ಹುಣಿಸೆ ರಸ ತೆಗೆದಿಡಿ.

     

ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ, ಸಾಸಿವೆ, ಜೀರಿಗೆ, ಕರಿಬೇವು, ಇಂಗು, ಅರಿಶಿನ ಹಾಕಿ ನಂತರ ರುಬ್ಬಿದ ಮಿಶ್ರಣವನ್ನು ಹಾಕಿ ಸ್ವಲ್ಪ ಕುದಿಸಿ ನಂತರ ಉಪ್ಪು, ಕಡಲೇ ಬೀಜದ ಪುಡಿ, ಹುಣಿಸೆ ರಸ, ಚೂರು ಬೆಲ್ಲ, ಸ್ವಲ್ಪ ನೀರು ಸೇರಿಸಿ ಕುದಿಯಲು ಇಡಿ.

ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಕಲೆಸಿದರೆ ರುಚಿಯಾದ, ಸುಲಭವಾಗಿ ಮಾಡಬಹುದಾದ ಗ್ರೌಂಡ್ ನಟ್ ಕರ್ರಿ ಸಿದ್ಧ!

ಧನ್ಯವಾದಗಳು.