ನೋಡಲು, ರುಚಿ ಸ್ವಲ್ಪ ನಮ್ಮ ಕಜ್ಜಾಯದ ಹಾಗೇನೆ! ಆದಲೆ ಖುಷಿ ವಿಷಯ ಅಂದರೆ ಕಜ್ಜಾಯದ ಹಾಗೆ ಹೆಚ್ಚು ಎಣ್ಣೆ ಹೀರುವುದಿಲ್ಲ!
ಮಾಡುವ ವಿಧಾನ:-
ಕೆಂಪಗಿರುವ, ಬಲಿತ ಸಿಹಿ ಕುಂಬಳ ತೊಳೆದು, ಸಿಪ್ಪೆ ತೆಗೆದು 2 ಲೋಟದಷ್ಟು ತುರಿದಿಡಿ.
1 ಅಥವಾ 1 1/2 ಲೋಟದಷ್ಟು ಬೆಲ್ಲ ತುರಿದಿಡಿ.
ದಪ್ಪ ತಳದ ಬಾಣಲೆಯಲ್ಲಿ 2 ಚಮಚ ತುಪ್ಪ ಹಾಕಿ ಕುಂಬಳ ಕಾಯಿಯ ತುರಿ ಹಾಕಿ ಸ್ವಲ್ಪ ಹುರಿದು, ಬೆಲ್ಲದ ಪುಡಿ ಹಾಕಿ ಕಡಿಮೆ ಉರಿಯಲ್ಲಿ ಕಲೆಸಿ. ನೀರು ಸೇರಿಸುವ ಅಗತ್ಯವಿಲ್ಲ. ಕುಂಬಳ ಕಾಯಿಯ ನೀರಿನಂಶವೇ ಸಾಕು.
ಬೆಲ್ಲ ಪೂರ್ತಿಯಾಗಿ ಕರಗಿದ ಮೇಲೆ 1 ಲೋಟ ಅಕ್ಕಿ ಹಿಟ್ಟು ಹಾಕಿ ಕಲೆಸಿ. ಬೆಲ್ಲ 1 ಲೋಟ ಆದರೆ ಅಕ್ಕಿ ಹಿಟ್ಟು 1 ಲೋಟ. ಹೆಚ್ಚಾದರೆ ಅಕ್ಕಿ ಹಿಟ್ಟು ಸಹ ಹೆಚ್ಚು ಬೇಕಾಗುತ್ತದೆ.
ಚೆನ್ನಾಗಿ ಕಲೆಸಿ ಕಡಿಮೆ ಉರಿಯಲ್ಲಿ 2 ಅಥವಾ 3 ನಿಮಿಷ ಬಿಟ್ಟು ಒಲೆಯಿಂದ ಇಳಿಸಿ.
ತಣ್ಣಗಾದ ನಂತರ ಗಟ್ಟಿಯಾಗುತ್ತೆ. ಆಗ ಪುಟ್ಟ ಪುಟ್ಟ ಉಂಡೆ ಮಾಡಿ.
ಬಾಣಲೆಯಲ್ಲಿ ಎಣ್ಣೆ ಕಾಯಲು ಹಾಕಿ, ಕಾದ ನಂತರ ಉರಿ ಪೂರ್ತಿಯಾಗಿ ಕಡಿಮೆ ಮಾಡಿ.
ಕೈಗೆ ಎಣ್ಣೆ ಸವರಿ ನಿಪ್ಪಟ್ಟಿನ ಹಾಗೆ ತೆಳ್ಳಗೆ ತಟ್ಟಿ, ಕಾದ ಎಣ್ಣೆಯಲ್ಲಿ ಕೆಂಪಗೆ ಕರಿದು ತೆಗೆದಿಡಿ.
ತುಂಬಾ ತೆಳ್ಳಗೆ ಬೇಡ. ತುಂಬಾ ದಪ್ಪ ಕೂಡ ಬೇಡ!
ತಣ್ಣಗಾದ ಮೇಲೆ ಗರಿ ಗರಿಯಾಗಿ ಇರುತ್ತದೆ.
ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ತುಂಬಾ ಚೆನ್ನಾಗಿರುತ್ತದೆ.
ಈ ದೀಪಾವಳಿಗೆ ನೀವೂ ಒಮ್ಮೆ ಮಾಡಿ ನೋಡಿ!
ಧನ್ಯವಾದಗಳು.
Leave A Comment