DAL MAHARANI ದಾಲ್ ಮಹಾರಾಣಿ

ದಾಲ್ ಉತ್ತರ ಭಾರತದ ಪ್ರಮುಖ ಆಹಾರ! ಚಪಾತಿ, ರೋಟಿ, ಪುಲ್ಕಾ, ಅನ್ನದೊಡನೆ ಪ್ರತಿ ದಿನ ತಪ್ಪದೆ ಮಾಡುತ್ತಾರೆ! ದಾಲ್ ನ ಒಂದು ಸ್ವಲ್ಪ ವಿಭಿನ್ನವಾದ ರೆಸಿಪಿ ಇಲ್ಲಿದೆ!

ದಾಲ್ ಮಹಾರಾಣಿ ಮಾಡುವ ವಿಧಾನ:-

1 ಲೋಟ ತೊಗರಿ ಬೇಳೆಗೆ ಸ್ವಲ್ಪ ಎಣ್ಣೆ ಹಾಕಿ, 2 ಅಥವಾ 3 ವಿಷಲ್ ಕೂಗಿಸಿಡಿ.

1 ಈರುಳ್ಳಿ, 2 ಟೋಮೋಟೋ, 4 ಹಸಿ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ.

1 ಚಿಕ್ಕ ಬೆಳ್ಳುಳ್ಳಿ, 1/2 ಇಂಚು ಶುಂಠಿ, 4 ಚಮಚ ಕಾಯಿ ತುರಿ ಚಟ್ನಿ ಹದಕ್ಕೆ ರುಬ್ಬಿಡಿ.

   

ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ, ಹೆಚ್ಚಿದ ಈರುಳ್ಳಿ, ಟೋಮೇಟೋ, ಹಸಿ ಮೆಣಸಿನಕಾಯಿ, ಚಿಟಿಕೆ ಅರಿಶಿಣ ಹಾಕಿ ಚೆನ್ನಾಗಿ ಹುರಿದು, ರುಬ್ಬಿದ ಮಿಶ್ರಣ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿದು, ನಂತರ ಬೆಂದ ಬೇಳೆ, ಉಪ್ಪು, ಸ್ವಲ್ಪ ನೀರುಬೇಕಾದರೆ ಹಾಕಿ ಕುದಿಸಿ.

   

ಕೊನೆಯಲ್ಲಿ ಒಗ್ಗರಣೆಗೆ ಜೀರಿಗೆ, ಕರಿಬೇವು, 1 ಮುರಿದ ಬ್ಯಾಡಗಿ ಮೆಣಸಿನಕಾಯಿ ಹಾಕಿ, ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿದರೆ ರುಚಿಯಾದ, ಸುಲಭವಾಗಿ ಮಾಡಬಹುದಾದ ದಾಲ್ ಮಹಾರಾಣಿ ಸಿದ್ಧ!

ಬಡಿಸುವಾಗ ಬೇಕಾದರೆ ನಿಂಬೆ ಹಣ್ಣಿನ ರಸ ಹಾಕಿಕೊಳ್ಳಬಹುದು!

ಚಪಾತಿ, ಪುಲ್ಕಾ, ಅನ್ನದೊಡನೆ ತುಂಬಾ ಚೆನ್ನಾಗಿರುತ್ತದೆ!

ಧನ್ಯವಾದಗಳು.

Leave a Comment

%d bloggers like this: