CURD KURMA ಕರ್ಡ್ ಕುರ್ಮಾ
ಮಾಡುವ ವಿಧಾನ:-
2 ಚಮಚ ಗಸಗಸೆ, 10 ರಿಂದ 12 ಗೋಡಂಬಿ ಬಿಸಿ ನೀರಿನಲ್ಲಿ ನೆನೆಸಿಡಿ.
5 ಚಮಚ ಕಾಯಿ ತುರಿದಿಡಿ.
ನೆಂದ ಗಸಗಸೆ, ಗೋಡಂಬಿ, ಕಾಯಿ ತುರಿ, ನಾಲ್ಕೈದು ಹಸಿ ಮೆಣಸಿನಕಾಯಿ ನುಣ್ಣಗೆ ರುಬ್ಬಿಡಿ. ಖಾರಾ ನಿಮ್ಮ ರುಚಿಗೆ ತಕ್ಕಷ್ಟು ಹಾಕಿ.
1 ಲೋಟ ಯಾವುದಾದರೂ ಕಾಳು (ನಾನು ಹುರುಳಿ ಕಾಯಿಯ ಬೀಜ ಹಾಕಿದ್ದೇನೆ. ಬಟಾಣಿ, ಅವರೆ ಕಾಳು ಬೇಕಾದರೂ ಹಾಕಬಹುದು) ಮತ್ತು 1 ಚಿಕ್ಕದಾಗಿ ಹೆಚ್ಚಿದ ಆಲೂ ಗೆಡ್ಡೆ 1 ವಿಷಲ್ ಕೂಗಿಸಿಡಿ.
1 ಈರುಳ್ಳಿ ಸಣ್ಣಗೆ ಹೆಚ್ಚಿಡಿ.
ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ, ಜೀರಿಗೆ, ಚಿಟಿಕೆ ಅರಿಶಿಣ, ಹೆಚ್ಚಿದ ಈರುಳ್ಳಿ ಹಾಕಿ ಸ್ವಲ್ಪ ಬಾಡಿಸಿ, ರುಬ್ಬಿದ ಮಿಶ್ರಣವನ್ನು ಹಾಕಿ ಸ್ವಲ್ಪ ಕುದಿಸಿ, ನಂತರ ಬೆಂದ ಕಾಳು, ಉಪ್ಪು ಹಾಕಿ ಚೆನ್ನಾಗಿ ಕಲೆಸಿ, 1/2 ಲೋಟ ಗಟ್ಟಿಯಾದ, ತಾಜಾ ಮೊಸರು ಹಾಕಿ ಕುದಿಸಿ
.
ಕೊನೆಯಲ್ಲಿ 1/8 ಚಮಚ ಗರಂ ಮಸಾಲ ಪುಡಿ, ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಯಾದ ಕರ್ಡ್ ಕುರ್ಮಾ ಸವಿಯಲು ಸಿದ್ಧ!
ಕಾಳುಗಳ ಬದಲು ಹೆಚ್ಚಿದ ತರಕಾರಿಗಳನ್ನು ಹಾಕಿ ಕೂಡ ಮಾಡಬಹುದು.
ಧನ್ಯವಾದಗಳು.